ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಹಿತ್ಯ ಸಮ್ಮೇಳನಗಳು ಸಹಕಾರಿ-ಕೆ. ಹೆಚ್. ಮುನಿಯಪ್ಪ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡಭಾಷೆಯನ್ನು ಉಳಿಸಿ ಬೆಳೆಸಲು ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಲಿದೆ ಎಂದು
 ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು. 

   ದೊಡ್ಡಬಳ್ಳಾಪುರ ತಾಲ್ಲೂಕಿನ ಮದರೆ ಹೋಬಳಿಯ ಕನಸವಾಡಿಯಲ್ಲಿ ನಡೆದ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ   ಬಾಗವಹಿಸಿ ಮಾತನಾಡಿ ಕನ್ನಡದ ದಾರ್ಶನಿಕ ಕವಿಗಳಾದ ರನ್ನ, ಪಂಪ, ಕುವೆಂಪು ಹಾಗೂ ಜ್ಞಾನ ಪೀಠ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ ಚಂದ್ರಶೇಖರ ಕಂಬಾರ, ಕುವೆಂಪು ಮುಂತಾದ ಕವಿಗಳು ಈ ನಾಡಿಗೆ ತನ್ನದೇ ಆದ ಕನ್ನಡ ಸೇವೆ ಮಾಡುವ ಮೂಲಕ ಅವರ ಸಾಹಿತ್ಯ ಹಾಗೂ ಕವನಗಳನ್ನು ಈ ನಾಡಿನ ಜನತೆಗೆ ಹಾಗೂ ಮುಂದಿನ ಪೀಳಿಗೆಗೆ ನೀಡಿದ್ದಾರೆ.

ಕನ್ನಡದ ಶಾಸನಗಳು ಐತಿಹಾಸಿಕವಾಗಿ ಹೆಸರುವಾಸಿಯಾಗಿವೆ. ಈ ನೆಲ, ಜಲ, ಭಾಷೆ, ನಾಡಿಗಾಗಿ ನಾವು ಸದಾ ಜೊತೆಯಾಗಿ ಕೆಲಸ ಮಾಡಬೇಕಿದೆ. 

ಕನ್ನಡದ ಪರಂಪರೆಯನ್ನು ಉಳಿಸಲು ನಮ್ಮಸರ್ಕಾರ ಬದ್ದವಾಗಿದ್ದು, ಈ ಕನ್ನಡ ಸಾಹಿತ್ಯ ಪರಿಷತ್ತಿಗೆ ಎಲ್ಲಾ ರೀತಿಯ ಸಹಕಾರ ಹಾಗೂ ನೆರವನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. 

 ನಾವು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವುದಲ್ಲದೆ ನಮ್ಮ ಮುಂದಿನ ಪೀಳಿಗೆಯ ಜನ ಈ ಭಾಷೆಯನ್ನು ಉಳಿಸಿ ಬೆಳೆಸಲು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು ಸೂಕ್ತವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಟಿ.ಕೆಂಪಣ್ಣ ಹಿರಿಯ ಸಾಹಿತಿ ಚನ್ನಬಸಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷರ ರಾಜಣ್ಣ ತಹಶಿಲ್ದಾ‌ರ್ ವಿಭಾ ರಾಥೋಡ್, ಡಿವೈಎಸ್ಪಿ ರವಿ, ಕಾರ್ಯನಿರ್ವಹಣಾಧಿಕಾರಿ ಮುನಿರಾಜು ಹಾಗೂ ಕನ್ನಡಪರ ಚಿಂತಕ ಚುಂಚೇಗೌಡ, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

 

Share This Article
error: Content is protected !!
";