ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಧ್ಯಾಪಕರ ಸಂಘದ ಸರ್ವ ಸದಸ್ಯರ ಅಧಿವೇಶನವು ಬೆಂಗಳೂರು ನಗರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಜಾನಪದ, ಸಂಕಿರ್ಣ ಸಾಹಿತ್ಯ ಹಾಗೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮತ್ತು
ಆರ್ಥಿಕ ಅಭಿವೃದ್ಧಿಯ ವಿವಿಧ ಆಯಾಮಗಳಲ್ಲಿ ವಿಶೇಷ ಕೃಷಿ ಮಾಡಿ, ಮೌಲ್ವಿಕ ಕೃತಿಗಳನ್ನು ಪ್ರಕಟಿಸಿರುವ ಮತ್ತು ಶಿಕ್ಷಣ ತಜ್ಞರು ಹಾಗೂ ಸಾಧಕರಾದ ವಿಶ್ರಾಂತ ಪ್ರಾಧ್ಯಾಪಕರುಗಳಿಗೆ “ಓಜ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
“ಓಜ ಶ್ರೀ” ಪ್ರಶಸ್ತಿಗೆ ಭಾಜನರಾದ ಜಾನಪದ ವಿದ್ವಾಂಸರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಲೇಖಕ ಪ್ರೊ.ಹೆಚ್.ಲಿಂಗಪ್ಪ, ಬರಹಗಾರ ಪ್ರೊ.ಟಿ.ವಿ. ಸುರೇಶ್ ಗುಪ್ತ, ಬಂಡಾಯ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ, ಪ್ರೊ.ಸಿ.ವಿ.ಪಾಟೀಲ್,
ಆರ್ಥಿಕ ತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಶಿಕ್ಷಣ ತಜ್ಞ ಡಾ.ಡಿ.ಎಸ್.ಪ್ರಕಾಶ್ ಹಿರೇಹಳ್ಳಿ ಇವರುಗಳಿಗೆ ಚಿತ್ರದುರ್ಗ ಜಿಲ್ಲಾ ಪದವಿ ಕಾಲೇಜು ನಿವೃತ್ತ ಅಧ್ಯಾಪಕ ಸಂಘದ ಅಧ್ಯಕ್ಷ ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ ಹಾಗೂ ಸಹೃದಯರು ಶುಭಾಶಯಗಳೊಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.