ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ಬ್ರಹ್ಮವಿದ್ಯಾ ಸಮಾಜದ ಕಚೇರಿಯಲ್ಲಿ ನಡೆದ ದಿ|ಮಹಾಲಿಂಗಪ್ಪ ನಿವೃತ್ತ ಮುಖ್ಯ ಉಪಾಧ್ಯಾಯರು ಇವರ ನೆನಪಿಗಾಗಿ ನಡೆದ ಮರಣ ನಂತರ ಜೀವಿತ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಎ.ನಾಗರಾಜ್ ಪರಶುರಾಮಪುರ ಭಾಗವಹಿಸಿ ಮಾತನಾಡಿ, ಗುರುಗಳಿಗೆ ಇದ್ದಂತಹ ಜ್ಞಾನ ಮತ್ತು ಸಂಸ್ಕಾರ ಅದ್ಭುತ. ಇದನ್ನ ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಅವರು ಸದಾ ಕಾರ್ಯ ಮಗ್ನನಾಗಿದ್ದರು ಎಂದು ನೆನೆದರು.
ಎಲ್ಲಾ ಯುಗಗಳಲ್ಲಿಯೂ ಕೂಡ ಗುರು ಪರಂಪರೆಗೆ ವಿಶಿಷ್ಟ ಸ್ಥಾನಮಾನ ಸಂಪ್ರದಾಯವಾಗಿ ಉಳಿಸಿಕೊಂಡಿ ಬಂದಿರುವುದು ಧರ್ಮಕ್ಕೆ ಹಿಡಿದಂತಹ ಕನ್ನಡಿ ಎಂದು ನಾಗರಾಜ್ ತಿಳಿಸಿದರು.
ಮುಂದುವರೆದು ಮಾತನಾಡಿದ ಕಿಸಾನ್ ನಾಗರಾಜ್ ಎ ಪರಶುರಾಂಪುರ ಮಾತನಾಡಿ, ದೇಹಕ್ಕೆ ಸಾವೆ ಹೊರತು ಆತ್ಮಕಲ್ಲ, ಯಾವತ್ತೂ ಕೂಡ ಮರಣ ನಂತರ ಆತ್ಮ ನಮ್ಮ ಸುತ್ತಲೂ ಸುತ್ತುತ್ತಿರುತ್ತದೆ ಮತ್ತು ಜೀವಿತ ಕಾಲದಲ್ಲಿ ತನ್ನ ಜೊತೆಗಿದ್ದ ಬಂಧು ಬಳಗ ಅಣ್ಣ-ತಮ್ಮಂದಿರು ಗಂಡ ಹೆಂಡತಿರ ಸುತ್ತಲೂ ಸುತ್ತುತ್ತಿರುತ್ತದೆ.
ವ್ಯತ್ಯಾಸವೆಂದರೆ ಆತ್ಮಕ್ಕೆ ದೇಹವಿರುವುದಿಲ್ಲ ಹಾಗಾಗಿ ಆತ್ಮ ನಮಗೆ ಕಾಣಿಸುವುದಿಲ್ಲ ಎಂದು ತಿಳಿಸಿ ನಾವು ಯಾವಾಗಲೂ ಕೂಡ ಜೀವಿತ ಅವಧಿಯಲ್ಲಿ ಆತ್ಮಕ್ಕೆ ಅನುಗುಣವಾಗಿ ಪರೋಪಕಾರಿಯಾಗಿ, ಸಾರ್ವಜನಿಕರ ಸೇವೆ ಮಾಡಿದರೆ ಗುರು ವೃಂದ ಮತ್ತು ಆತ್ಮಗಳು ಸಂತೋಷವಾಗಿ ಇರುತ್ತವೆ ಎಂದು ಹೇಳಿದರು.
ತುಮಕೂರಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಘವೇಂದ್ರ ಚಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬ ನಾಡು ನುಡಿಯಂತೆ ಪ್ರತಿಯೊಬ್ಬರೂ ಒಂದು ಗುರಿ, ಗುರಿಯ ಹಿಂದೆ ಗುರು ಇರಬೇಕು ಅಂತ ಗುರು ಮಹಾಲಿಂಗಪ್ಪ ಮೇಷ್ಟ್ರು ಸದಾ ಹೇಳುತ್ತಿದ್ದರು ಎಂದು ತಿಳಿಸಿದರು.
ನಿವೃತ್ತ ಮುಖ್ಯ ಇಂಜಿನಿಯರ್ ಬಲರಾಮ್ ಮಾತನಾಡಿ ಆಧ್ಯಾತ್ಮಿಕದ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿ ಮಹಾಲಿಂಗಪ್ಪ ಮೇಸ್ಟ್ರು ಎಲ್ಲ ಸಂದರ್ಭದಲ್ಲೂ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಂಡು ವಿದ್ಯಾರ್ಥಿಗಳಿಗೆ ಸಮಯೋಚಿತವಾದ ಸಲಹೆಗಳನ್ನು ಕೊಟ್ಟು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ನರಸಿಂಹಮೂರ್ತಿ ಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತರಾದ ತಿಪ್ಪೇಸ್ವಾಮಿ, ಸರೋಜಮ್ಮ, ಟಿ ಶಿವಮ್ಮ, ನಾಗಮಣಿ, ಪರಶುರಾಮ್, ತಿಪ್ಪೇಸ್ವಾಮಿ, ಕಡೆ ಹುಡೇ ವೆಂಕಟೇಶ್, ಲಕ್ಷ್ಮಣ್ ಗೌಡ ಇನ್ನು ಮುಂತಾದವರು ಉಪಸ್ಥಿತರಿದ್ದರು.

