ಚಂದ್ರವಳ್ಳಿ ನ್ಯೂಸ್, ಪಾವಗಡ:
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೆ ಟಿ ಹಳ್ಳಿ ಪಂಚಾಯಿತಿ ವ್ಯಾಪ್ತಿಯ ರಾಮಯ್ಯನ ಪಾಳ್ಯ ಗ್ರಾಮದಲ್ಲಿ ಒಕ್ಕಲಿಗ ಸಮಾಜದ ಸಹಕಾರದೊಂದಿಗೆ ಗ್ರಾಮದ ಸರ್ವಜನಾಂಗದ ಹಿತೈಷಿಗಳೊಂದಿಗೆ ಶನಿವಾರ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರದ ಜನಪ್ರಿಯ ನಟರಾದ ರಂಗಾಯಣ ರಘು, ಸಮುದಾಯದ ಹಿರಿಯ ಗಣ್ಯ ಮುಖಂಡರುಗಳಾದ ಡಿ ರಂಗೇಗೌಡ ( ಕೆ ಟಿ ಹಳ್ಳಿ ). ತೋಟಗಾರಿಕೆ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿ ಕೆ ಆರ್ ದೇವರಾಜ್, ಕದ್ರಿಹಳ್ಳಿಯ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಜಗನ್ನಾಥ್, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎನ್ ಎ ಈರಣ್ಣ, ಪಾವಗಡ ತಾಲ್ಲೂಕು ಮುಖ್ಯ ವೈದ್ಯಾಧಿಕಾರಿ ಡಾ ಕಿರಣ್, ವಕೀಲ ಹನುಮಂತರಾಯಪ್ಪ, ಜೆಡಿಎಸ್ ಮುಖಂಡರಾದ ಸುನಿತಾ ಸೇರಿದಂತೆ ರಾಮಯ್ಯನಪಾಳ್ದದ ಮುಖಂಡರುಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಕ್ತಿಯ ಮನದಲ್ಲಿ ಕಳಸ ಒತ್ತು ಗುರುವರ್ಯರನ್ನು ಗ್ರಾಮಕ್ಕೆ ಬರಮಾಡಿಕೊಂಡರು. ನಾಡ ಹಬ್ಬದ ಸಂಭ್ರಮ ಊರಲ್ಲಿ ಸೃಷ್ಟಿಯಾಗಿತ್ತು ಎಂದು ರಘು ಗೌಡ ತಿಳಿಸಿದ್ದಾರೆ.