ಲೋಕಾಯುಕ್ತ ದಾಳಿ ; ನಗರಸಭೆಯ 7 ಜನರ ಮೇಲೆ ದೂರು ದಾಖಲು 

News Desk

ಚಂದ್ರವಳ್ಳಿ ನ್ಯೂಸ್, ಹರಿಹರ :
ಲೋಕಾಯುಕ್ತ ಅಧಿಕಾರಿಗಳು ಎರಡು ದಿನಗಳ ಕಾಲ ನಡೆಸಿದ ದಾಳಿಯ ಪರಿಣಾಮ ನಗರಸಭೆಯ ಪೌರಾಯುಕ್ತರು ಸೇರಿ 7 ಜನರ ಮೇಲೆ ದಾಖಲು ಮಾಡಲಾಗಿದೆ.

     ಕೆಲ ದಿನಗಳಿಂದ ನಗರಸಭೆಯಲ್ಲಿ ಬಿ ಖಾತಾ ನೀಡಿಕೆಯ ಅಭಿಯಾನ ನಡೆಯುತ್ತಿದ್ದು, ಲೋಕಾಯುಕ್ತ ದಾಳಿ ನಡೆಯಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಪರಿಶೀಲಿನಿಯ ನೆಪದಲ್ಲಿ ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿ ಗಳು ಕಚೇರಿಯ ಕಡತಗಳನ್ನು ಸವಿಸ್ತಾರವಾಗಿ ಪರಿಶೀಲನೆ ನಡೆಸಿದ್ದರು.

     ನಗರಸಭೆ ಕಚೇರಿ ಆವರಣದಲ್ಲಿ ಕಂಪ್ಯೂಟರ್ ಇಟ್ಟುಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿದ್ದ ಮೌನೇಶ್ ಮತ್ತು ಮಹಮ್ಮದ್ ಆಫೀಸ್ ವುಲ್ಲಾ ಎನ್ನುವ ಇಬ್ಬರನ್ನು ಅನುಮಾನ ದಿಂದ ವಿಚಾರಣೆ ನಡೆಸಲಾಗಿ ಪೌರಾಯುಕ್ತರು ಹಾಗೂ ಕಚೇರಿ ವ್ಯವಸ್ಥಾಪಕರ ಆದೇಶದ ಮೇಲೆ ನಾವು ಸಾರ್ವಜನಿಕರಿಗೆ ಸಹ ಸಹಾಯ ಮಾಡುತ್ತಿರುವದಾಗಿ ತಿಳಿಸಿರುತ್ತಾರೆ.

   ಇವರ ಉತ್ತರದಿಂದ ಲೋಕಾಯುಕ್ತ ಅಧಿಕಾರಿಗಳು ತೃಪ್ತರಾಗದ ಕಾರಣದಿಂದ ಲೋಕಾಯುಕ್ತ ಉಪಾದಿಕ್ಷಕಿ ಕೆ.ಕಲಾವತಿಯವರ ಹರಿಹರ ನಗರ ಠಾಣೆಗೆ ದೂರಿನ ಹಿನ್ನೆಲೆಯಲ್ಲಿ ಪೌರಾಯುಕ್ತ ಪಿ.ಸುಬ್ರಹ್ಮಣ್ಯ ಶ್ರೇಷ್ಠಿ, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರಾ, ಪ್ರಭಾರಿ ಕಂದಾಯ ನಿರೀಕ್ಷಕ ರಮೇಶ್ ಅಲ್ಲದೆ  ಕಚೇರಿ ಆವರಣದಲ್ಲಿ ಶಾಮಿಯಾನ ಹಾಕಿಕೊಂಡು ಕಂಪ್ಯೂಟರ್ ಸಿಸ್ಟಮ್ ಹಾಗೂ ಪ್ರಿಂಟರ್ ಬಳಕೆ ಮಾಡುತ್ತಾ ಹಣ ಪಡೆಯುತ್ತಿದ್ದ ಖಾಸಗಿ ವ್ಯಕ್ತಿಗಳಾದ ಮೌನೇಶ್, ಮೊಹಮ್ಮದ್ ಆಫೀಸ್ ಉಲ್ಲಾ ಮತ್ತು ಹನುಮಂತಪ್ಪ ತುಂಬಿಗೇರಿ ಅವರ ಮೇಲೆ ಪ್ರಕರಣ ದಾಖಲು ಮಾಡಿರುತ್ತಾರೆ.

    ದೂರಿನಲ್ಲಿ ತಿಳಿಸಿರುವಂತೆ 2025ರ ಜ. 01 ರಿಂದ ಏ.07 ರ ವರೆಗೆ ಮೌನೇಶ್‍ರವರ ಬ್ಯಾಂಕ್ ಖಾತೆಯಲ್ಲಿ 1,63,266 ರೂ, ಗಳು ಹಾಗೂ ಮೊಹಮ್ಮದ್ ಆಫೀಸ್ ಉಲ್ಲಾರ ಸಹೋದರ ಮೊಹಮ್ಮದ್ ತೌಶಿಫ್ ಉಲ್ಲಾ ಇವರ ಬ್ಯಾಂಕ್ ಖಾತೆಯಲ್ಲಿ ರೂ, 89,400 ಗಳು ಜಮಾ ಆಗಿರುವುದು ಕಂಡು ಬಂದಿರುತ್ತದೆ ಎಂದು ತಿಳಿಸಲಾಗಿದೆ.

    ಲೋಕಾಯುಕ್ತ ದಾಳಿಯ ವೇಳೆಯಲ್ಲಿ ಅಧೀಕ್ಷಕ ಎಂ.ಎಸ್. ಕೌಲಾಪುರೆ ಸೇರಿದಂತೆ ಸುಮಾರು 12 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು. ಪೌರಾಯುಕ್ತರು ಸೇರಿದಂತೆ 7 ಜನ ಅಧಿಕಾರಿ ಆಗಿ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಾಗಿದ್ದು ಮುಂದೆನಾಗುವುದು ಎಂದು ಕಾದು ನೋಡಬೇಕಾಗಿದೆ.

ಹಲವಾರು ವರ್ಷಗಳಿಂದ ಹರಿಹರ ಸಭೆಯ ಆವರಣದಲ್ಲಿ ಖಾಸಗಿ ನಿರುದ್ಯೋಗಿ ವ್ಯಕ್ತಿಗಳು ತಮ್ಮದೇ ಕಂಪ್ಯೂಟರ್ ಮತ್ತು ಪ್ರಿಂಟರ್ ಬಳಸಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿ ಯಿಂದ ಕೆಲಸ ನಿರ್ವಹಿಸ್ಕೊಂಡು ಬರುತ್ತಿದ್ದಾರೆ.ಇವರು ಮಾಡುವ ಕೆಲಸಕ್ಕೆ ನನ್ನ ಅವಧಿಯಲ್ಲಿ ನಗರಸಭೆಯಿಂದ ಯಾವುದೇ ಪರವಾನಿಗೆಯಾಗಲಿ, ಒಪ್ಪಿಗೆಯಾಗಲಿ ನೀಡಿರುವುದಿಲ್ಲ.

     ಆದರೆ ಹಲವಾರು ವರ್ಷಗಳಿಂದ ಅವರು ಇಲ್ಲಿ ನಡೆಸಿಕೊಂಡು ಬರುತ್ತಿರುವ ಕಾರಣಕ್ಕಾಗಿ ಹಾಗು ಸಾರ್ವಜನಿಕರಿಗೆ ಅನುಕೂಲ ವಾಗುತ್ತದೆ ಎನ್ನುವ ದೃಷ್ಟಿಯಿಂದ ನಾವು ಸುಮ್ಮನಿದ್ದೆವು.ಈ ಹಿಂದೆ ಇದ್ದಂತಹ ಅಧಿಕಾರಿಗಳು ಯಾವ ಕಾರಣಕ್ಕಾಗಿ ಅವರನ್ನು ಬಳಸಿಕೊಂಡರೋ ಗೊತ್ತಿಲ್ಲ. ನಾನು ಬಂದಾಗಿನಿಂದ ಅವರಿಂದ ಯಾವುದೇ ರೀತಿಯ ಪ್ರತಿಫಲವನ್ನು ನಿರೀಕ್ಷಿಸಿಲ್ಲ, ಪಡೆದಿಲ್ಲ ಮತ್ತು ನನ್ನ ಪಾತ್ರ ಏನು ಇಲ್ಲ ಎಂದು ಪತ್ರಿಕೆ ಮೂಲಕ ಸ್ಪಷ್ಟಪಡಿಸುತ್ತೇನೆ. ಪಿ.ಸುಬ್ರಹ್ಮಣ್ಯ ಶ್ರೇಷ್ಠಿ, ಪೌರಯುಕ್ತರು, ನಗರಸಭೆ ಹರಿಹರ.

Share This Article
error: Content is protected !!
";