ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಕೊಪ್ಪಳ ನಗರಸಭೆ ಕಚೇರಿ ಸೇರಿ
5 ಕಡೆ ದಾಳಿ ನಡೆಸಿದೆ.
ಕೊಪ್ಪಳ ಲೋಕಾಯುಕ್ತ ಕಚೇರಿಯ ಡಿವೈಎಸ್​​ಪಿ ವಸಂತಕುಮಾರ ನೇತೃತ್ವದಲ್ಲಿ
ನಗರಸಭೆ

ಸೋಮಲಿಂಗಪ್ಪ, ಕಂದಾಯ ಅಧಿಕಾರ ಉಜ್ಚಲ, ಗುತ್ತಿಗೆದಾರ ಶಕೀಲ ಪಟೇಲ್ (ನಗರಸಭೆ ಅಧ್ಯಕ್ಷನ ಸಹೋದರ), ಪ್ರವೀಣ ಕಂದಾರಿ ಮನೆಯ ಮೇಲೆ ಕೂಡ ದಾಳಿ ನಡೆಸಲಾಗಿದೆ.
2023-24 ನೆಯ ಸಾಲಿನ ನಗರಸಭೆಯ ಅನುದಾನದಲ್ಲಿ ದುರ್ಬಳಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ.

- Advertisement - 

ನಗರಸಭೆ ವತಿಯಿಂದ ಕೈಗೊಳ್ಳಲಾದ 336 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂಪಾಯಿ ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿತ್ತು.

ಅರ್ಧಂಬರ್ಧ ಕಾಮಗಾರಿ, ಕೆಲ ಕಡೆ ಕಾಮಗಾರಿ ಮಾಡದೆ ಹಣ ಬಳಸಿರುವ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.

- Advertisement - 

 

 

Share This Article
error: Content is protected !!
";