ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ ಲೋಕಾಯುಕ್ತರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಡಿಮೆ ಬೆಲೆಗೆ ಮನೆ ಬರೆದುಕೊಡುವಂತೆ ಒತ್ತಾಯಿಸಿದ್ದ ಆರೋಪದಲ್ಲಿ ಕಳೆದ ವಾರ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು
, ಈ ಸಂಬಂಧ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.

ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯೆ ಪ್ರವೇಶಿಸಿ ಮನೆ ಮಾಲೀಕರಿಗೆ ಕಿರುಕುಳ ನೀಡಿದ್ದ ಪೊಲೀಸರ ವಿರುದ್ಧ ಚಿನ್ನೇಗೌಡ ನೀಡಿದ ದೂರು ಆಧರಿಸಿ ಇನ್ಸ್​ಪೆಕ್ಟರ್​ ಎ ವಿ ಕುಮಾರ್, ಕಾನ್ಸ್​​ಟೇಬಲ್​ಗಳಾದ ಉಮೇಶ್, ಅನಂತ್, ಕೃತ್ಯದಲ್ಲಿ ಭಾಗಿಯಾಗಿದ್ದ ಸಿ ಪಿ ಗವೀಗೌಡ, ದಿವ್ಯ, ಸೋಮಶೇಖರ್ ಆರಾಧ್ಯ ಹಾಗೂ ದಿನೇಶ್ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಏನಿದು ಪ್ರಕರಣ?:
ಪತ್ನಿ ಅನುಷಾ ಅವರು ಸರ್ಕಾರಿ ಉದ್ಯೋಗದಲ್ಲಿದ್ದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಆ ಪ್ರಕರಣದಲ್ಲಿ ಬಿ ರಿಪೋರ್ಟ್‌ಸಲ್ಲಿಸುವುದಾಗಿ ಮತ್ತು ಅದಕ್ಕೆ ಪ್ರತಿಯಾಗಿ 4 ಕೋಟಿ ಮೌಲ್ಯದ ಮನೆಯನ್ನು ಕಡಿಮೆ ಮೊತ್ತಕ್ಕೆ ಬರೆದುಕೊಡುವಂತೆ ಇನ್ಸ್​ಪೆಕ್ಟರ್​ ಕುಮಾರ್ ಕಿರುಕುಳ ನೀಡುತ್ತಿದ್ದರು ಎಂದು ಸಿವಿಲ್ ಗುತ್ತಿಗೆದಾರ ಚನ್ನೇಗೌಡ ಆರೋಪಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಅಲ್ಲದೇ ಈ ಹಿಂದೆ ನಮ್ಮ ಮನೆಗೆ ಕೆಲವರನ್ನು ನುಗ್ಗಿಸಿದ್ದರು ಎಂಬುದು ಅವರ ಆರೋಪವಾಗಿತ್ತು. ಈ ಸಂಬಂಧ ವಿಡಿಯೋ ಮಾಡಿಕೊಂಡಿದ್ದೆ. ನಂತರ ಠಾಣೆಗೆ ನನ್ನನ್ನು ಕರೆಸಿ ಒತ್ತಾಯ ಪೂರ್ವಕವಾಗಿ ಮನೆ ಬರೆದುಕೊಡುವ ಅಗ್ರಿಮೆಂಟ್​ಗೆ ಸಹಿ ಹಾಕುವಂತೆ ಒತ್ತಡ ಹೇರಿದ್ದರೆಂದು ಆರೋಪಿಸಿದ್ದಾರೆ.

 ಕಳೆದವಾರ ಅಗ್ರಿಮೆಂಟ್‌ಗೆ ಸಹಿ ಹಾಕಿಸಲು ನಾಗರಬಾವಿಯ ಖಾಸಗಿ ಹೋಟೆಲ್‌ಗೆ ಕುಮಾರ್ ಕರೆಸಿದ್ದರು. ಚನ್ನೇಗೌಡರ ಪತ್ನಿ ಅನುಷಾಳ ಸಹಿ ಹಾಕಿಸಿಕೊಳ್ಳಲು ಕರೆಸಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿತ್ತು. ಈ ವೇಳೆ, ಇಬ್ಬರು ಕಾನ್​ಸ್ಟೇಬಲ್​ಗಳು ಸೇರಿದಂತೆ ಐವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

ದಾಳಿ ವಿಚಾರ ತಿಳಿದು ಕುಮಾರ್ ಪರಾರಿಯಾಗಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿದ್ದವು. ಇನ್ಸ್​ಪೆಕ್ಟರ್​ ಎ ವಿ ಕುಮಾರ್ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆ ಆಗಿದ್ದರೂ ಪದಕ ಸ್ವೀಕರಿಸಲು ಅವರು ಹೋಗಿರಲಿಲ್ಲ.

 

Share This Article
error: Content is protected !!
";