ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಶ್ರೀಕೃಷ್ಣ ವಿರುದ್ಧ ಎಫ್ಐಆರ್ ದಾಖಲಿಸಿದ ಲೋಕಾಯುಕ್ತರು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹೊರಗುತ್ತಿಗೆಯ ನವೀಕರಣಕ್ಕಾಗಿ 5 ಸಾವಿರ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜವನಗೊಂಡನಹಳ್ಳಿ ಪ್ರಾರ್ಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶ್ರೀಕೃಷ್ಣ ಇವರ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ.

- Advertisement - 

ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ಎಂ.ಲತಾ ಮೋಹನ್ ಕೃಷ್ಣ ಅವರು ನೀಡಿದ ದೂರು ಆಧರಿಸಿ ಲೋಕಾಯುಕ್ತ ಕಚೇರಿಯ ತನಿಖಾಧಿಕಾರಿ ಬಿ.ಮಂಜುನಾಥ್ ಅವರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

- Advertisement - 

ಅಲ್ಲದೆ ಹೊರಗುತ್ತಿಗೆ ನರ್ಸ್ ಲತಾ ಮತ್ತು ವೈದ್ಯ ಶ್ರೀಕೃಷ್ಣ ನಡುವೆ ನಡೆದ ಮೊಬೈಲ್ ಸಂಭಾಷಣೆಯುಳ್ಳ ಮೊಮರಿ ಕಾರ್ಡ್ ಅನ್ನು ಲೋಕಾಯುಕ್ತರು ದೂರುದಾರರಿಂದ ಪಡೆದಿದ್ದಾರೆ.

 

- Advertisement - 

Share This Article
error: Content is protected !!
";