ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಮೇಲೆ 40% ಆರೋಪ ಮಾಡಿದ್ದರು. ಇಂದು ಅದರಿಂದಲೂ ಮುಕ್ತರಾಗಿದ್ದೇವೆ. ಆರೋಪ ಮಾಡಿದ್ದ ನಿರುದ್ಯೋಗಿ ಗುತ್ತಿಗೆದಾರರು ಕಾಂಗ್ರೆಸ್ ಟೂಲ್ ಕಿಟ್ ಆಗಿ ಆರೋಪ ಮಾಡಿದ್ದರು ಎಂದು ಬಿಜೆಪಿ ಮುಖಂಡರು ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಅಧಿಕಾರಕ್ಕೆ ಬಂದು 16 ತಿಂಗಳು ಕಳೆದರೂ ಇಲ್ಲಿಯವರೆಗೂ ಅವರ ಕೈಯಲ್ಲಿ ಪ್ರೂವ್ ಮಾಡಲು ಆಗಲಿಲ್ಲ. ಹೈಕೋರ್ಟ್‌ನಲ್ಲೂ ಆರೋಪಕ್ಕೆ ಸೂಕ್ತ ದಾಖಲೆ ಮಂಡನೆ ಮಾಡಲಿಲ್ಲ, ನೋಟಿಸ್ ನೀಡಿದರೂ ಹಾಜರಾಗಲಿಲ್ಲ. ಈಗ ಲೋಕಾಯುಕ್ತ ಕೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಗುತ್ತಿಗೆದಾರನೇ ಅಲ್ಲದ, ಒಂದೇ ಒಂದು ಗುತ್ತಿಗೆ ಕಾಮಗಾರಿಯನ್ನು ನಿರ್ವಹಿಸದ ಅಂಬಿಕಾಪತಿಯಿಂದ ಸುಳ್ಳು ಹೇಳಿಸಿದ ಕರ್ನಾಟಕ ಕಾಂಗ್ರೆಸ್ ನಿಮಗೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ಖಚಿತ-ನಿಶ್ಚಿತ-ಖಂಡಿತ!! ಎಂದು ಅವರು ಎಚ್ಚರಿಸಿದ್ದಾರೆ.