ಚಂದ್ರವಳ್ಳಿ ನ್ಯೂಸ್, ಮೈಸೂರು:
ಕರ್ನಾಟಕ ಲೋಕಾಯುಕ್ತ ಮುಡಾ ಹಗರಣ ಕುರಿತ ಪ್ರಕರಣದಲ್ಲಿ ಪಾರದರ್ಶಕವಾಗಿ ತನಿಖೆ ಮಾಡಿಲ್ಲ, ಸಾವಿರಾರು ಕೋಟಿ ರೂ.ಹಗರಣ ಆಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವುದು ಎಷ್ಟು ಸರಿ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಮೈಸೂರು ಟೌನ್‌ಹಾಲ್‌ಬಳಿ ಮಾದ್ಯಮದ ಜೊತೆಗೆ ಮಾತನಾಡಿದ ಅವರು,
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಮುಡಾ 50:50 ಪ್ರಕರಣದಲ್ಲಿ ಕ್ಲೀನ್‌ಚಿಟ್‌ನೀಡಲು ಲೋಕಾಯುಕ್ತ ಯಾರು? ಎಂದು ಅವರು ಕಿಡಿಕಾರಿದ್ದಾರೆ. ಲೋಕಾಯುಕ್ತ ಡಿಜಿ ಹಾಗೂ ಪೊಲೀಸರನ್ನು ನೇಮಕ ಮಾಡುವುದು ಸರ್ಕಾರಗಳು. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. 5 ಸಾವಿರ ಕೋಟಿಗೂ ಮೀರಿ ಮುಡಾದಲ್ಲಿ ಅಕ್ರಮ ನಡೆದಿದೆ. ಲೋಕಾಯುಕ್ತ ಪಾರದರ್ಶಕವಾಗಿ ತನಿಖೆ ಮಾಡಿಲ್ಲ ಎಂದು ವಿಧಾನ ಪರಿಸತ್ ಸದಸ್ಯ ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದರು.
ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸುವಾಗ ಹಿಂದಿನಿಂದ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್62 ಕೋಟಿ ಬರಬೇಕು ಎಂದು ಸಿದ್ದರಾಮಯ್ಯನವರಿಗೆ ಹೇಳಿಕೊಡುತ್ತಾರೆ. ಅದನ್ನು ಯಾಕೆ ಗಮನಿಸುತ್ತಿಲ್ಲ ಲೋಕಾಯುಕ್ತ? ಇವೆಲ್ಲವುಗಳಿಂದ ಸಿದ್ದರಾಮಯ್ಯ ಪಾತ್ರವಿರುವುದು ಗೊತ್ತಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ದರೋಡೆಗಳು, ಮೈಕ್ರೋ ಫೈನಾನ್ಸ್‌ಹಾವಳಿ ನೋಡಿದರೆ ಸರ್ಕಾರ ಇಲ್ಲ ಅನಿಸುತ್ತದೆ. ಪೊಲೀಸ್‌ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದ ಅಧಿಕಾರಿಗಳಾಗಿ ಕೆಲಸ ಮಾಡಬೇಕು, ಶಾಸಕರ ಅಧಿಕಾರಿಗಳಾಗಬಾರದು ಎಂದು ಅವರು ತಾಕೀತು ಮಾಡಿದರು.
ಬೆಂಗಳೂರಿನಲ್ಲಿ ಎಸಿಪಿ ಪೋಸ್ಟಿಂಗ್ಗೆ 2 ಕೋಟಿ ನೀಡಬೇಕು. ಮೈಸೂರಿನಲ್ಲಿ ಎಷ್ಟು ನೀವೇ ಹೇಳಬೇಕು? ಪೊಲೀಸ್ನವರೇ ರಾಬರಿ ಮಾಡಿಸುತ್ತಾರೆ. ಹಾಗಾಗಿ ಪೊಲೀಸ್‌ಇಲಾಖೆ ಹಾಳಾಗಿ ಹೋಗಿದೆ. ಪರಮೇಶ್ವರ್ಗೆ ಸಬ್ಇನ್ಸ್ಪೆಕ್ಟರ್ವರ್ಗಾವಣೆ ಮಾಡುವ ಅಧಿಕಾರ ಮಾತ್ರ ಇದೆ. ಉಳಿದ ಅಧಿಕಾರ ಮುಖ್ಯಮಂತ್ರಿ ನಿಭಾಯಿಸುತ್ತಾರೆ. ಗೃಹಮಂತ್ರಿ ಡಮ್ಮಿ ಅಂತ ಅನಿಸುತ್ತದೆ ಎಂದು ಆರೋಪ ಮಾಡಿದರು.
ಅರಮನೆ ವಿಚಾರದಲ್ಲಿ ಜನರಲ್ಲಿ ಗೊಂದಲ, ಅಪನಂಬಿಕೆ ಮೂಡಿಸುವಂತ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಕೋರ್ಟ್‌ಕೊಟ್ಟಂತಹ ತೀರ್ಮಾನದ ಬಗ್ಗೆ ಗೌರವವಿಲ್ವಾ? ಸುಗ್ರೀವಾಜ್ಞೆ ತಂದಿರುವುದು ತಪ್ಪಿಸಿಕೊಳ್ಳುವುದಕ್ಕೆ. ಯದುವಂಶದವರ ಕೂರಿಸಿ ಒಂದು ಸೆಟ್ಲ್ಮೆಂಟ್ ಮಾಡಿಕೊಳ್ಳಬಹದು ಎಂದು ವಿಶ್ವನಾಥ್ ಸರ್ಕಾರಕ್ಕೆ ಸಲಹೆ ನೀಡಿದರು.
ಮೈಸೂರು ಅರಮನೆ ಬಗ್ಗೆ ಚೇಷ್ಟೇ ಮಾಡುವುದು, ಕಿರುಕುಳ ಕೊಡುವ ಕೆಲಸವನ್ನ ಸಿದ್ದರಾಮಯ್ಯ ಮಾಡುತ್ತಾನೆ ಇರುತ್ತಾನೆ. ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ಕೆಲಸಕ್ಕೂ ಮುಂದಾಗಿದ್ದರು. ಇದು ಹುಚ್ಚಾಟ. ಯದುವಂಶದ ರಾಜರೆಂದರೆ ಪ್ರಪಂಚದಲ್ಲಿ ಹೆಸರುವಾಸಿ. ಬಹಳ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿರುವುದು ಮೈಸೂರು ಮಹಾರಾಜರು ಮಾತ್ರ. ಅಂತಹ ಮಹಾರಾಜರ ಬಗ್ಗೆ ಹಗುರವಾಗಿ ಮಾತನಾಡುವುದು ಒಳ್ಳೆಯದಲ್ಲ. ನಾನು ಡೆಮಾಕ್ರೆಟಿಕ್‌ಅಂತ ತೋರಿಸಿಕೊಳ್ಳುತ್ತಿರುವುದು, ತೋರಿಕೆಯ ಮಾತು ಎಂದು ವಿಶ್ವನಾಥ್ ವಾಗ್ದಾಳಿ ಮಾಡಿದರು.
ಲಕ್ಷ್ಮಣ್‌ಅವರೇ ನಿಮಗೇಕೆ ಬಿಜೆಪಿ ಉಸಾಬರಿ, ನೀವು ಜೆಡಿಎಸ್-ಬಿಜೆಪಿ ವಿರುದ್ಧ ಮಾತನಾಡುತ್ತೀರಾ, ಹಲವಾರು ವಿಚಾರಗಳ ಬಗ್ಗೆ ಹಲವರು ಮಾತನಾಡುತ್ತಾರೆ. ಇದು ಜನತಂತ್ರ ವ್ಯವಸ್ಥೆ. ದೊಡ್ಡ ಬುದ್ಧಿವಂತನ ಥರ ಮಾತನಾಡುವುದು ಸರಿಯಲ್ಲ ಲಕ್ಷ್ಮಣ್ ಅವರಿಗೆ ವಿಶ್ವನಾಥ್ ಕಿವಿ ಮಾತು ಹೇಳಿದರು.
ರೆಡ್ಡಿ ದುಡ್ಡು, ವೋಟ್‌ನಮ್ಮ ವಾಲ್ಮೀಕಿ ಸಮಾಜದ್ದು. ಬಳ್ಳಾರಿ ಅಂದರೆ ವಾಲ್ಮೀಕಿ ಸಮಾಜ ಹಾಗೂ ಹಿಂದುಳಿದ ವರ್ಗಗಳ ವೋಟ್. ನಾನೇ ಇವನನ್ನು ಬೆಳೆಸಿದೆ ಅಂದ್ರೆ, ದುಡ್ಡೇನು ನಿಮ್ಮ ಅಪ್ಪನ ಮನೆಯಿಂದ ತಂದಿಯಾ? ಗಣಿ ದುಡ್ಡು ಕೊಟ್ಟೆ ಎಂದು ವಿಶ್ವನಾಥ್ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ಮಾಡಿದರು.
ರಾಮುಲು ಒಂದು ಸಮಾಜದ ನಾಯಕ, ಅಷ್ಟು ಹಗುರವಾಗಿ ಮಾತನಾಡಬಾರದು. ಎಲ್ಲ ಡಮ್ಮೀ ವರಿಷ್ಟರುಗಳೇ. ವಿಜಯೇಂದ್ರ ಯಾರು, ಯಡಿಯೂರಪ್ಪ ಯಾರು ಎನ್ನುವುದು ಜನರಿಗೆ ಗೊತ್ತಿಲ್ವ? ಪ್ರಜಾಪ್ರಭುತ್ವದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಬೇಕು ಎಂದು ವಿಶ್ವನಾಥ್ ಆಗ್ರಹ ಮಾಡಿದರು.
ಶಾಸಕ ಜಿ.ಟಿ.ದೇವೇಗೌಡ ಅವರು ಮುಡಾ ಸೈಟ್‌ಹಗರಣದಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯನ ಮೆಚ್ಚಿಸೋಕೆ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಎಲ್ಲರಿಗೂ ಬೈಯ್ಯುತ್ತಿದ್ದಾರೆ. ಯಾರು ಯಾವ ಪಾರ್ಟಿ ಬಿಟ್ಟುರು ಏನೂ ಆಗಲ್ಲ. ಪಾರ್ಟಿ ಅಂದರೆ ಜನರು. ಜಿ.ಟಿ.ದೇವೇಗೌಡ ಬಂದು ಎಲ್ಲರನ್ನು ಗೆಲ್ಲಿಸಿಬಿಡ್ತಾರಾ? ನನಗೆ ಯಾವ ಅಧ್ಯಕ್ಷ ಸ್ಥಾನವೂ ಬೇಡ. ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿ ಉಳಿಯುತ್ತೇನೆ ಎಂದು ವಿಶ್ವನಾಥ್ ಹೇಳಿದರು.
ಬೆಂಗಳೂರಿನಲ್ಲಿ ಮೊನ್ನೆ ನಡೆದ ಬಿಜೆಪಿ ಮೀಟಿಂಗ್ಗೆ ಅವರು ನಮ್ಮನ್ನು ಕರೆದಿಲ್ಲ. ಮೈಸೂರಿನವರು ಯಾವ ಮೀಟಿಂಗ್ಗೂ ಕರೆಯುವುದಿಲ್ಲ. ಬಿಜೆಪಿಗೆ ಸಾಮಾನ್ಯ ಪ್ರಜ್ಞೆಯಿಲ್ಲ. ನಾನು ರಾಜಕಿಯದಿಂದ ನಿವೃತ್ತಿ ಪಡೆಯುವುದಿಲ್ಲ ಎಂದು ವಿಶ್ವನಾಥ್ ಎಚ್ಚರಿಸಿದರು.
ಕೆ.ಆರ್.ನಗರದಲ್ಲಿ ಕುಮಾರಸ್ವಾಮಿ ಸತ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ಗೆ ಕರೆತಂದಿದ್ದು ಯಾರು? ಸಿಎಂ ಮಾಡಿದ್ದು ಯಾರು? ಎಲ್ಲವನ್ನು ಹೆಚ್ಡಿ ಕುಮಾರಸ್ವಾಮಿ ಜನರಿಗೆ ತಿಳಿಸಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.

