ಬಿಇಒ ಕಚೇರಿ ಅಧೀಕ್ಷಕನ ದೂರು: ಭ್ರಷ್ಟಾಚಾರ ಪ್ರಕರಣದಲ್ಲಿ ದಾಖಲೆ ಸಲ್ಲಿಸಲು ಲೋಕಾಯುಕ್ತ ಸೂಚನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಭದ್ರಾವತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ
ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಅಧಿಕೃತ ದಾಖಲೆಗಳನ್ನು ತುರ್ತಾಗಿ ಸಲ್ಲಿಸುವಂತೆ ಕರ್ನಾಟಕ ಲೋಕಾಯುಕ್ತವು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದೆ. 

​ಪ್ರಕರಣದ ಹಿನ್ನೆಲೆ:
​ಭದ್ರಾವತಿ ಬಿಇಒ ಕಚೇರಿಯ ಅಧೀಕ್ಷಕರಾದ ಲಿಂಗರಾಜು ಎಂ. ಅವರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಎ.ಕೆ. ಮತ್ತು ಮಂಜುನಾಥ ಎಂಬುವವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನನ್ವಯ ಮಾರ್ಚ್ 2
, 2026 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರ ಕಲಂ 7(a) ಮತ್ತು 7(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

- Advertisement - 

​ಲೋಕಾಯುಕ್ತ ಕೇಳಿರುವ ಪ್ರಮುಖ ಮಾಹಿತಿಗಳು:
​ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್-3 ವೀರೇಶ್‌ಸಿ.ಎಲ್. ಕುಸಲಾಪುರ ಅವರು ಈ ಕೆಳಗಿನ ಮಾಹಿತಿಯನ್ನು ಕೋರಿದ್ದಾರೆ:

​ಅರ್ಜಿಗಳ ವಿವರ: ದೂರುದಾರ ಲಿಂಗರಾಜು ಅವರು ತಮ್ಮ ವಾರ್ಷಿಕ ವೇತನ ಬಡ್ತಿ ಮತ್ತು ಹಿಂಬಾಕಿ ವೇತನ ಮಂಜೂರಾತಿಗಾಗಿ ಸಲ್ಲಿಸಿದ ಅರ್ಜಿಗಳ ಸ್ವೀಕೃತಿ ಪ್ರತಿಗಳು. 

- Advertisement - 

​ಕಾರ್ಯವಿಧಾನ: ವೇತನ ಬಡ್ತಿ ಮತ್ತು ಭತ್ಯೆಗಳ ಮಂಜೂರಾತಿಗೆ ಇಲಾಖೆಯಲ್ಲಿ ಅನುಸರಿಸಬೇಕಾದ ಅಧಿಕೃತ ಕಾರ್ಯವಿಧಾನ (Work Process). 

​ಹೊಣೆಗಾರಿಕೆ: ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಬಿಇಒ ನಾಗೇಂದ್ರಪ್ಪ ಎ.ಕೆ. ಅವರ ಕರ್ತವ್ಯ ಮತ್ತು ಹೊಣೆಗಾರಿಕೆಗಳೇನು?
​ವಿಳಂಬದ ವಿವರ: ಪ್ರಸ್ತುತ ಈ ಅರ್ಜಿಗಳು ಯಾವ ಕಚೇರಿಯಲ್ಲಿ, ಯಾರ ಬಳಿ ಬಾಕಿ ಇವೆ ಎಂಬ ಮಾಹಿತಿ. 

​ತನಿಖೆಗೆ ಆದೇಶ:
​ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ)
, ಯಾವುದೇ ವಿಳಂಬಕ್ಕೆ ಆಸ್ಪದ ನೀಡದಂತೆ ದೃಢೀಕರಿಸಿದ ದಾಖಲೆಗಳನ್ನು ದ್ವಿಪ್ರತಿಯಲ್ಲಿ ಮುದ್ದಾಂ (ಖುದ್ದಾಗಿ) ಸಲ್ಲಿಸುವಂತೆ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

 

Share This Article
error: Content is protected !!
";