ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಫೆ.೨೮ರಂದು ನಿವೃತ್ತರಾದ ಚಿತ್ರದುರ್ಗ ಜಿಲ್ಲಾ ಡಿಎಫ್‌ಒ ಓ.ರಾಜಣ್ಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಇತ್ತೀಚೆಗೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಬೆಂಗಳೂರಿನ ಅರಣ್ಯ ಇಲಾಖೆ ನೌಕರರ ಗೋಪಾಲ್ ಎಂಬುವವರ ಬಳಿ ಪತ್ತೆಯಾದ ಸುಮಾರು ೪೫ ಲಕ್ಷ ಹಣ ಡಿಎಫ್‌ಒ ರಾಜಣ್ಣನವರಿಗೆ ಸೇರಿದ್ದು ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಡಿಎಫ್‌ಒ ರಾಜಣ್ಣ ಸೇವೆಯಿಂದ ನಿವೃತ್ತಿಯಾದ ನಂತರ ಚಿತ್ರದುರ್ಗದಲ್ಲಿ ವಾಸವಿದ್ದು ಚಳ್ಳಕೆರೆ ನಗರದ ವಾಲ್ಮೀಕಿ ನಗರದ ಬಂಡೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನೂತನ ಮನೆ ನಿರ್ಮಿಸಿದ್ದರು. ಲೋಕಾಯುಕ್ತರು ಅಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.