ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ತಳಕು ಹೋಬಳಿಯ ಘಟಪರ್ತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದು ಅಧ್ಯಕ್ಷರಾಗಿ ಲೋಕೇಶ್‌ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದ್ದು, ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ ಕಾರ್ಯನಿರ್ವಹಿಸಿದ್ದರು.
೧೮ ಜನ ಸದಸ್ಯರ ಬಲಪಂಚಾಯಿತಿಯಲ್ಲಿದ್ದು, ಮೂವರು ಸದಸ್ಯರು ಗೈರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಲೋಕೇಶ್‌ನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾ ಪ್ರಕ್ರಿಯೆ ಕೈಗೊಂಡ ಚುನಾವಣಾಧಿಕಾರಿ ಚುನಾವಣಾ ನಿಯಮಗಳ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಯ ಲೋಕೇಶ್‌ನಾಯ್ಕ್, ಏಕಮಾತ್ರ ಅಭ್ಯರ್ಥಿಯಾಗಿದ್ದು ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ಧಾರೆಂದು ಹಾಜರಿದ್ದ ಎಲ್ಲರ ಸಮಕ್ಷಮದಲ್ಲಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಸದಸ್ಯರಿಗೆ ಉತ್ತಮ ಕೆಲಸ ಮಾಡಿ ಪಂಚಾಯಿತಿಯನ್ನು ಅಭಿವೃದ್ದಿಯತ್ತ ಕೊಂಡೊಯಿರಿ ಎಂದರು.
ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರಾದ ನಿರಂಜನ್, ತಿಪ್ಪೇಸ್ವಾಮಿ, ಮಂಜುನಾಥ, ರವಿಕುಮಾರ್, ವೀರಭದ್ರಪ್ಪ, ಅಶ್ವಿನಿ, ಸೇವಾನಾಯ್ಕ, ರುದ್ರೇಶ್, ಉಮಾದೇವಿ, ತಿಮ್ಮಾರೆಡ್ಡಿ, ಓಬಕ್ಕ, ಶ್ರೀನಿವಾಸ್, ಲಕ್ಷ್ಮಕ್ಕ, ನಾರಾಯಣಪ್ಪ, ಕೃಷ್ಣಪ್ಪ, ಲೋಕೇಶ್, ದುರ್ಗಪ್ಪ, ತಿಪ್ಪೇಸ್ವಾಮಿ, ಮುಖಂಡರಾದ ಚಂದ್ರಪ್ಪ, ಶಿವಾರೆಡ್ಡಿ, ಯಲ್ಲಪ್ಪ, ಪಿಡಿಒ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.