ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಿವೃತ್ತ ಕನಕ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾಗಿ ಡಿ.ಆರ್.ಲೋಕೇಶ್ವರಪ್ಪ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಡಿ.ಆರ್ ಲೋಕೇಶ್ವರಪ್ಪ ಇವರು ಚಿತ್ರದುರ್ಗದ ನಿವಾಸಿಯಾಗಿದ್ದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದರು.
ಚಿತ್ರದುರ್ಗ ನಿವೃತ್ತ ಕನಕ ನೌಕರರ ಸಂಘದ ಗೌರವಾಧ್ಯಕ್ಷ ಕೆ.ರಾಜಣ್ಣ, ಅಧ್ಯಕ್ಷ ರಮೇಶ್ ಮದರಿ, ಕಾರ್ಯಾಧ್ಯಕ್ಷ ಡಿ.ಎನ್.ವೀರಭದ್ರಪ್ಪ, ಉಪಾಧ್ಯಕ್ಷ ವೀರಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಜಿ ಗುರುರಾಜ್, ಖಜಾಂಚಿ ಸೀತಾರಾಮಪ್ಪ ಸೇರಿದಂತೆ ಮತ್ತಿತರರು ಲೋಕೇಶ್ವರಪ್ಪ ಇವರನ್ನು ಅಭಿನಂದಿಸಿದ್ದಾರೆ.

