ಕರ್ನಾಟಕದ ಸಂಪತ್ತು ಕೇರಳಕ್ಕೆ ಲೂಟಿ: ಸರ್ಕಾರದ ವಿರುದ್ಧ ಗಂಭೀರ ಆರೋಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಗಣಿ ಸಂಪತ್ತನ್ನು ಕಮಿಷನ್ ಆಸೆಗೆ ನೆರೆ ರಾಜ್ಯವಾದ ಕೇರಳಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

​ಪ್ರಮುಖ ಆರೋಪಗಳು:
​ಅಕ್ರಮ ಸಾಗಾಣಿಕೆ: ಪ್ರತಿದಿನ ಕರ್ನಾಟಕದ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತನ್ನು ಅಕ್ರಮವಾಗಿ ಕೇರಳಕ್ಕೆ ಸಾಗಿಸಲಾಗುತ್ತಿದೆ.

- Advertisement - 

​ಚೆಕ್‌ಪೋಸ್ಟ್ ಭ್ರಷ್ಟಾಚಾರ: ಬಂಡೀಪುರದ ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಪ್ರತಿ ಲಾರಿಯಿಂದ 300 ರೂ. ಲಂಚ ಪಡೆದು ಅಕ್ರಮ ಕಳ್ಳಸಾಗಣೆಗೆ ಸಾಥ್ ನೀಡುತ್ತಿದ್ದಾರೆ.

​ಇಲಾಖೆಗಳ ಶಾಮೀಲು: ಆರ್‌ಟಿಒ ಮತ್ತು ಪೊಲೀಸ್ ಇಲಾಖೆಯ ಪರೋಕ್ಷ ಬೆಂಬಲವಿಲ್ಲದೆ ಓವರ್‌ಲೋಡ್ ಟಿಪ್ಪರ್‌ಗಳು ಗಡಿ ದಾಟಲು ಸಾಧ್ಯವೇ ಇಲ್ಲ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

- Advertisement - 

​ಸಿಎಂ ಸಿದ್ದರಾಮಯ್ಯಗೆ ಅಶೋಕ್ ಕೇಳಿದ ನೇರ ಪ್ರಶ್ನೆಗಳು:
​ಆರ್. ಅಶೋಕ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿ ಹಲವು ಕಟು ಪ್ರಶ್ನೆಗಳನ್ನು ಎಸೆದಿದ್ದಾರೆ.​ಹೈಕಮಾಂಡ್ ಹಸ್ತಕ್ಷೇಪ?: ಈ ವ್ಯವಸ್ಥಿತ ದಂಧೆಯು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆಯೇ?.

​ರಾಹುಲ್-ಪ್ರಿಯಾಂಕಾ ಪಾಲು?: ಈ ಕಳ್ಳ ದಂಧೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೂ ಪಾಲು ಇದೆಯೇ?.
​ಮೌನಕ್ಕೆ ಕಾರಣವೇನು?: ನಿಮ್ಮ ಮೂಗಿನ ನೇರಕ್ಕೇ ಈ ಮಾಫಿಯಾ ನಡೆಯುತ್ತಿದ್ದರೂ ನೀವು ಮೌನವಾಗಿರುವುದು ನೋಡಿದರೆ, ಕಲೆಕ್ಷನ್ಹಣ ಯಾರ ಜೇಬು ಸೇರುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.

​”ಕರ್ನಾಟಕಕ್ಕೆ ಸಿಗಬೇಕಾದ ಸಂಪನ್ಮೂಲಗಳನ್ನು ನೆರೆ ರಾಜ್ಯಕ್ಕೆ ಧಾರೆ ಎರೆಯುತ್ತಿರುವ ನಿಮ್ಮನ್ನು ಕನ್ನಡರಾಮಯ್ಯ ಎನ್ನಬೇಕೋ ಅಥವಾ ಕಳ್ಳರಾಮಯ್ಯ ಎನ್ನಬೇಕೋ?” ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

​ಬದ್ಧತೆಯ ಎಚ್ಚರಿಕೆ:
​ಕನ್ನಡಿಗರ ತೆರಿಗೆ ಹಣ ಮತ್ತು ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲು ಬಿಡುವುದಿಲ್ಲ ಎಂದು ಗುಡುಗಿರುವ ಅಶೋಕ್, ತಕ್ಷಣವೇ ಅಕ್ರಮ ಸಾಗಾಣಿಕೆಯನ್ನು ನಿಲ್ಲಿಸಬೇಕು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

​ಈ ಆರೋಪಗಳು ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಗಡಿ ಭಾಗದ ಗಣಿ ಮಾಫಿಯಾ ಕುರಿತು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

Share This Article
error: Content is protected !!
";