ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಭುತ್ವದ ನೀತಿಯಲ್ಲಿ ಜನಪ್ರತಿನಿಧಿಗಳನ್ನು ಜನರಿಂದ ಜನರಿಗಾಗಿ ಆಯ್ಕೆಯಾದ ಸೇವಕರು ಎಂದು ಪರಿಗಣಿಸಬೇಕು. ಚುನಾವಣೆ ನೀತಿಯಲ್ಲಿ ಗೆದ್ದಿರುವ ಪ್ರತಿನಿಧಿಗಳು ಪ್ರಭುತ್ವದ ಆಡಳಿತ ನೀಡಬೇಕಾಗುತ್ತದೆ. ಚುನಾವಣೆ ಪ್ರಭುತ್ವದ ಆಡಳಿತಕ್ಕೆ ಮೆಟ್ಟಿಲುಗಳು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ನಾನಾ ಬಗೆಯ ತಂತ್ರಗಳನ್ನು ಬಳಸಿಕೊಂಡು ಗೆಲುವು ಸಾಧಿಸಲು ಪ್ರಯತ್ನಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದವು ಹಣ, ಜಾತಿ, ಸುಳ್ಳು ಆಶ್ವಾಸನೆ ಇವುಗಳೊಂದಿಗೆ ಇನ್ನು ಕೆಲವು ತಂತ್ರ ಕುತಂತ್ರಗಳನ್ನು ಬಳಸಿ ಗೆದ್ದು ಬೀಗುತ್ತಿದ್ದಾರೆ.
ಮತದಾರರ ಪ್ರಭುಗಳು ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು. ಆದರೆ ಮತದಾನ ಪ್ರಭುಗಳು ಅಭ್ಯರ್ಥಿಯ ಶ್ರೀಮಂತಿಕೆಯ ಲೆಕ್ಕಾಚಾರ, ತನಗೆಷ್ಟು ಲಾಭದಾಯಕ ಎನ್ನುವುದರ ಅನುಗುಣವಾಗಿ ಮತದಾನ ಮಾಡುತ್ತಿದ್ದಾರೆ.ಈ ವಿಚಾರದಿಂದ ಪ್ರಭುತ್ವದ ಆಡಳಿತ ಶೋಚನೀಯ ಸ್ಥಿತಿಗೆ ತಲುಪಿದೆ.
ಜನಪ್ರತಿನಿಧಿಗಳಿಗೆ(ರಾಜಕಾರಣಿಗಳಿಗೆ) ವೇತನ ಹಾಗೂ ಪೆನ್ಷನ್ ನೀಡಲು ಕಾರಣವೆಂದರೆ ಸಾರ್ವಜನಿಕ ಕೆಲಸಗಳ ಸಲುವಾಗಿ ಆಯಾ ಪ್ರದೇಶದ ಜನತೆ ಜನಪ್ರತಿನಿಧಿಗಳ ಬಳಿ ಬರುವುದು ಸಹಜ. ಬಂದಂತಹ ಮತದಾರ ಪ್ರಭುಗಳಿಗೆ ಗೌರವದಿಂದ ಕಾಪಿ, ಟೀ,. ತಿಂಡಿ,. ಊಟ ಇನ್ನಿತರೇ ವಿಚಾರದಲ್ಲಿ ಸತ್ಕರಿಸುವುದು ಸಾಮಾನ್ಯ ವಿಷಯ ಇದರೊಂದಿಗೆ ಕ್ಷೇತ್ರದ ಉದ್ದಗಲಕ್ಕೂ ಜನಪ್ರತಿನಿಧಿಗಳು ಸಂಚರಿಸಬೇಕು. ಈ ಎಲ್ಲಾ ಸೂಕ್ಷ್ಮತೆಯ ವಿಚಾರದಲ್ಲಿ ಜನಪ್ರತಿನಿಧಿಗಳಿಗೆ ಸಂಬಳ ಕೊಡಲಾಗುತ್ತದೆ.
ಪ್ರಭುತ್ವದ ಸೇವಕರಿಗೆ ವಿದ್ಯಾರ್ಹತೆ ಲೆಕ್ಕವಿಲ್ಲ . ಕಾರಣ ಸೇವೆಯ ಮನೋಭಾವಕ್ಕೆ ವಿದ್ಯೆ ಮಾನದಂಡವಲ್ಲ. ಸೇವೆ ಎಂಬುದು ಮಾನವೀಯತೆಯ ಮನೋಧರ್ಮ ಸೇವೆಗೆ ಬೇಕಿರುವುದು ತಾಳ್ಮೆ, ಕರುಣೆ, ನ್ಯಾಯ, ನೀತಿ, ಧರ್ಮ ಇವುಗಳಲ್ಲಿ ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಇದರೊಂದಿಗೆ ಸಾಮಾನ್ಯ ಜ್ಞಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಾನ್ಯತೆ ನೀಡುವ ಮೂಲಕ ಕ್ಷೇತ್ರವನ್ನು ಉನ್ನತಿಗೊಳಿಸಬೇಕು. ಇದು ಕಥೆಯಲ್ಲ ಇದುವೇ ಪ್ರಭುತ್ವದ ರಾಜನೀತಿ. ಲೇಖನ-ರಘು ಗೌಡ 9916101265