ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ, ರಾಗಿ ಸಾಗಾಟ ಯತ್ನ ಆರೋಪ ಹಿನ್ನಲೆಯಲ್ಲಿ ಪಡಿತರ ಉಗ್ರಾಣದ ಮೇಲೆ ಕರವೇ ಕಾರ್ಯಕರ್ತರ ದಾಳಿ ಮಾಡಿ ಸಾಗಾಟಕ್ಕೆ ತಡೆ ಹಾಕಿದ್ದಾರೆ.
ಲಾರಿಗೆ ರಾಗಿ ಲೋಡ್ ಮಾಡುವಾಗ ಕರವೇ ಕಾರ್ಯಕರ್ತರ ತಡೆ ಹಾಕಿದ್ದಾರೆ. ಕರವೇ ಪ್ರವೀಣ್ ಶೆಟ್ಟಿ ಬಣದ ಮಂಜುನಾಥ್ ನೇತೃತ್ವದಲ್ಲಿ ಪರಿಶೀಲನೆ ಮಾಡಿದಾಗ ಚಳ್ಳಕೆರೆ ಎಪಿಎಂಸಿಯಲ್ಲಿರುವ ಪಡಿತರ ಉಗ್ರಾಣದಲ್ಲಿ ಈಚರ್ ಲಾರಿಗೆ 200 ಕ್ವಿಂಟಲ್ ರಾಗಿ ತುಂಬಿಸುತ್ತಿದ್ದ ಸಿಬ್ಬಂದಿಗಳನ್ನು ಪತ್ತೆ ಮಾಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ರಾಗಿ ತುಂಬಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.