ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಕನ್ನಡ ತಾಯಿ ಬಾಷೆ ಬಹುತ್ವದ ಬಾಷೆ ಸೊಗಡಿನ ಬಾಷೆ ಕನ್ನಡ ಸಾಹಿತ್ಯವು ಮನಸ್ಸಿನ ಬೀಜಗಳಿದ್ದಂತೆ ಎಂದು ಸಮ್ಮೇಳನ ಸರ್ವಾಧ್ಯಕ್ಷರಾದ ಎಂ ಜಿ ರಂಗಸ್ವಾಮಿ ಹೇಳಿದರು.
ಅವರು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಜಗತ್ತಿನಲ್ಲಿ ಎಲ್ಲ ಬಾಷೆಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕನ್ನಡ ಬಾಷೆಗಿದೆ ಆಂಗ್ಲ ಭಾಷೆಯ ಉಪನ್ಯಾಸಕನಾಗಿ ಕನ್ನಡ ಸಾಹಿತ್ಯ ಮತ್ತು ಬರವಣಿಗೆಯ ಮೂಲಕ ಇತಿಹಾಸದಲ್ಲಿ ದಾಖಲಾಗಿರುವ ಸಂಗತಿಗಳನ್ನು ಹೊರ ಚೆಲ್ಲಿರುವೆ ಬ್ರಿಟಿಷರ ಕಾಲದಲ್ಲಿ ನಡೆದ ಅಭಿರುದ್ದಿ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡಿ ಬುಕನಾನ್ ಪುಸ್ತಕಗಳನ್ನು ಬರೆದಿದ್ದು ಬರವಣಿಗೆಗೆ ಸಂಶೋಧನಾ ವಿಧಾನಗಳನ್ನು ಅನುಸರಿಸಬೇಕಿದೆ.
ಕನ್ನಡದ ಮನಸ್ಸುಗಳು ಓದುಗರ ಪ್ರೋತ್ಸಾಹ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದ್ದು ಮತ್ತಷ್ಟು ಬರವಣಿಗೆಗೆ ಪ್ರೇರಣೆ ಸಿಕ್ಕಿದೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೀಳು ಅಭಿರುಚಿ ಬರಹಗಳನ್ನು ಅದರ ಸತ್ಯ ಅಸತ್ಯವನ್ನು ಗ್ರಹಿಸಬೇಕು ಪದಗಳ ಅರ್ಥಗಳನ್ನು ಅರ್ಥೈಸಿಕೋಳ್ಳಬೇಕು.
ಸಾಹಿತ್ಯ ಸಮ್ಮೇಳನಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪತ್ರಕರ್ತ ಮಾಲತೇಶ್ ಅರಸ್ ಮಾತನಾಡಿ ಸಾಹಿತ್ಯವನ್ನು ಬರುರೂಪಿ ಆಯಾಮಗಳಲ್ಲಿ ಗುರುತಿಸಬಹುದು ಆಸಕ್ತಿವಂತರ ಸಂಖ್ಯೆ ಕ್ಷಿಣಿಸುತ್ತಿದೆ ಸಾಕಷ್ಟುಸಂಖ್ಯೆ ಅರ್ಹ ಬರಹಗಾರರಿಗೆ ಕವಿಗಳಿಗೆ ಅವರ ಭಾವನೆಗಳನ್ನು ನಿವೇದಿಸಿಕೊಳ್ಳಲು ಸಾಹಿತ್ಯ ಆಸಕ್ತಿಯ ವೇದಿಕೆಗಳು ಸಿಗುತ್ತಿಲ್ಲ ಎಂದರು.
ಕಸಾಪ ಕೋಶಾಧಿಕಾರಿ ಜಿ,ಪ್ರೇಮ್ ಕುಮಾರ್ ಮಾತನಾಡಿ ಸಾಹಿತ್ಯ ಚಟುವಟಿಕೆಗಳ ಪ್ರೋತ್ಸಾಹಕ ವಾತಾವರಣಕ್ಕೆ ಸದಾ ಬೆಂಬಲವಾಗಿ ನಿಲ್ಲಲಾಗುವುದು.
ತಾಲೂಕಿನಲ್ಲಿ ಯಳನಾಡು ಅಂಜನಪ್ಪ, ರಾಜಣ್ಣ ಶೆಟ್ಟಿ ಸೇರಿದಂತೆ ಅನೇಕರು ತಮ್ಮ ಅನನ್ಯ ಸೇವೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು. ಕಸಾಪ ಅಧ್ಯಕ್ಷ ರಾಮಚಂದ್ರಪ್ಪ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು.
ಹರ್ತಿಕೋಟೆ ಮಹಾಸ್ವಾಮಿ, ಸಕ್ಕರ ರಂಗಸ್ವಾಮಿ, ವಿರೇಶ್, ಶಿವಮೂರ್ತಿ, ಚಮನ್ ಷರೀಫ್ ಮತ್ತೀತರರು ಇದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ.ಡಿ ಎಂ ಗೌಡ, ಜಿ ಡಿ ತಿಮ್ಮಯ್ಯ, ಹೆಚ್ ಎಸ್ ಸುಂದರ್ ರಾಜ್, ತನುಜೀಯಾ ನಾಜ್, ಎಂ ವೈ ರಾಜೀವ್, ಲಲಿತಮ್ಮ, ಮಂಜುಳ, ಕುಸುಮಾ, ಯೋಗಿಶ್, ಬಡಕ್ಕ, ಆರ್ ತಿಪ್ಪೇಸ್ವಾಮಿ, ಗೀತಾಭಟ್, ಸಣ್ಣಮ್ಮ, ಟಿ.ರಂಗನಾಥ್, ಪಾತೇಗೌಡ ಸಾಧಕರನ್ನು ಸನ್ಮಾನಿಸಲಾಯಿತು.

