ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ರಾಜ್ಯ ಮಾದಾರ ಗುತ್ತಿಗೆದಾರರ ಮಹಾಸಭಾದ ಲಾಂಛನವನ್ನು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಂಗಳವಾರ ಲೋಕಾರ್ಪಣೆಗೊಳಿಸಿದರು.
ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾದಾರ ಗುತ್ತಿಗೆದಾರರ ಸಂಘವನ್ನು ಮುನ್ನಡೆಸಿಕೊಂಡು ಹೋಗುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡು ನಿಮಗೆ ವಹಿಸಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಗುಣಮಟ್ಟದಲ್ಲಿ ಪೂರೈಸುವಂತೆ ತಿಳಿಸಿದರು.
ಕರ್ನಾಟಕ ರಾಜ್ಯ ಮಾದಾರ ಗುತ್ತಿಗೆದಾರರ ಮಹಾಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಸಿ.ರಾಜಣ್ಣ, ಗೌರವಾಧ್ಯಕ್ಷ ಹೆಚ್.ಶ್ರೀನಿವಾಸ್, ನಿಂಗಜ್ಜ ಶಾಪುರ್ ಹೆಚ್. ಮಹಾರಾಜ್ ಕುಮಾರಯ್ಯ, ಆರ್.ಕೃಷ್ಣಮೂರ್ತಿ, ಗೂಳಿಹಟ್ಟಿ ಗಿರೀಶ್, ಕೆ.ಜಿ. ಲಕ್ಷ್ಮಿನರಸಯ್ಯ, ಮಾಲತೇಶ್, ಬ್ಯಾಡಗಿ ಉಮೇಶ್ ಕಡೆಮನಿ, ಪರಶುರಾಮ್, ಜಿ.ಹೆಚ್.ಮೋಹನ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

