ಮಾಸಿಕ ಗಮಕ ವಾಚನ ಕಾರ್ಯಕ್ರಮದಲ್ಲಿ ಮಾದಾರಶ್ರೀ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಆಯೋಜಿಸುತ್ತಿರುವ ಮಾಸಿಕ ಗಮಕ ವಾಚನ, ವ್ಯಾಖ್ಯಾನ ಸಂಭ್ರಮದ 30ನೇ ಕಾರ್ಯಕ್ರಮವು  ಜನವರಿ-30 ರಂದು ಮಂಗಳವಾರ ಸಂಜೆ 6 ಗಂಟೆಗೆ  ನಗರದ ಜೆ ಸಿ ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದೆ.

ಅಂದಿನ ವಾಚನವನ್ನು ವಿದುಷಿ ಚಂಪಕಾ ಶ್ರೀಧರ್ ಚಿತ್ರದುರ್ಗ, ಇವರು ನಡೆಸಿಕೊಡಲಿದ್ದು, ವ್ಯಾಖ್ಯಾನವನ್ನು ವಿದ್ವಾನ್ ಅಚ್ಯುತ ಅವಧಾನಿಯವರು ಮತ್ತೂರು,ಇವರು ನಡೆಸಿಕೊಡಲಿದ್ದಾರೆ . ಕುಮಾರವ್ಯಾಸ ಭಾರತದ ಕಾವ್ಯದ”ಕಿರಾತಾರ್ಜುನೀಯ” ಪ್ರಸಂಗವಾಗಿರಲಿದೆ.

- Advertisement - 

ಅಂದಿನ ಸಮಾರಂಭದ ದಿವ್ಯ ಸಾನಿಧ್ಯವನ್ನ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳವರು ವಹಿಸಲಿದ್ದಾರೆಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು
,ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಮಕ ಕಲೆಯನ್ನು ಪ್ರೋತ್ಸಾಹಿಸಲು ಸಹ ಕೋರಿದ್ದಾರೆ.

- Advertisement - 

Share This Article
error: Content is protected !!
";