ಮಧುಸೂದನ್ ನಾಯ್ಕ್ ಪಾಕಿಸ್ತಾನದವರು ಅಂತ ಯಾರೋ ಅಂದ್ರೆ ಅದನ್ನೂ ಬರೆದುಕೊಳ್ತೀರಾ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಧುಸೂದನ್ ನಾಯ್ಕ್ ಪಾಕಿಸ್ತಾನದವರು ಅಂತ ಯಾರೋ ಅಂದ್ರೆ ಅದನ್ನೂ ಬರೆದುಕೊಳ್ತೀರಾ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಜನರು ಯಾವ ಜಾತಿ ಎಂದು ಬರೆಸುತ್ತಾರೋ ಅದನ್ನು ಉಲ್ಲೇಖಿಸಲಾಗುತ್ತದೆ ಎಂಬ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಪಾಕಿಸ್ತಾನ ಜಿಂದಾಬಾದ್ ಅಂತಾರೆ ಬರೆದುಕೊಳ್ತೀರಾ?. ಏನು ಬೇಕಾದರೂ ಬರೀಬಹುದು ಅಂದ್ರೆ ದೇಶ ವಿರೋಧಿಗಳಿಗೆ ಅವಕಾಶ ಮಾಡಿಕೊಟ್ಟಂತೆ. ಆಯೋಗದ ಅಧ್ಯಕ್ಷ ಸಂವಿಧಾನಕ್ಕೆ ಅಪಚಾರ ಆಗೋ ಹೇಳಿಕೆ ಕೊಟ್ಟಿದ್ದಾರೆ. ಇದು ರಾಜಕಾರಣದ ಓಲೈಕೆಗಾಗಿ ಮಾಡ್ತಿರುವ ಸಮೀಕ್ಷೆ. ಈ ಸಮೀಕ್ಷೆಯಿಂದ ಯಾವುದೇ ಜಾತಿಗೂ ನ್ಯಾಯ ಸಿಗಲ್ಲ. ಲಿಂಗಾಯತ ಧರ್ಮ ಒಡೆಯುವ ಸಂಚು ಮಾಡಿದ್ದ ತಂಡವೇ ಈಗ ಹಿಂದೂ ಧರ್ಮ ಒಡೆಯಲು ಹೊರಟಿದೆ ಎಂದು ಕಿಡಿಕಾರಿದರು.

- Advertisement - 

ಇದು ಧರ್ಮ ಒಡೆಯುವ ಸಮೀಕ್ಷೆ. ಕೇಂದ್ರವೇ ಸಮೀಕ್ಷೆ ಮಾಡ್ತಿದೆ. ರಾಜ್ಯದ ಸಮೀಕ್ಷೆ ಅಗತ್ಯ ಇಲ್ಲ. ಸಿದ್ದರಾಮಯ್ಯಗೆ ಕ್ರಿಶ್ಚಿಯನ್ ಧರ್ಮದವರ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೇಶ. ಹೈಕಮಾಂಡ್​​ನಿಂದಲೇ ಈ ನಿರ್ದೇಶನ ಬಂದಿದೆ. ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಿಸಿಕೊಳ್ಳಲು ಹಿಂದೂಗಳ ಸಂಖ್ಯೆ ಕಡಿಮೆ ಮಾಡಲು ಹೊರಟಿದ್ದಾರೆ. ಸರ್ಕಾರ ಸಮೀಕ್ಷೆ ಹೆಸರಲ್ಲಿ ಹಿಂದೂ ಧರ್ಮ ಒಡೆಯುವ, ಅವಹೇಳನ‌ಮಾಡುವ ಕೆಲಸ ಮಾಡ್ತಿದೆ. ಕಾಂಗ್ರೆಸ್ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿ ಇದೆ. ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಮಾಡಿದ್ರು. ಎಲ್ಲದರ ಮುಂದೆ ಕ್ರಿಶ್ಚಿಯನ್ ಹೆಸರು ತಂದಿದ್ದಾರೆ. ಇದು ಯಾಕೆ ತಂದ್ರು? ಸಿದ್ದರಾಮಯ್ಯಗೆ ಅಧಿಕಾರ ಹೋಗುವ ಆತಂಕ. ಸೋನಿಯಾ ಗಾಂಧಿಯವರನ್ನು ಓಲೈಸಲು ಕ್ರಿಶ್ಚಿಯನ್ ಹೆಸರು ತಳುಕು ಹಾಕಿದ್ದಾರೆ ಎಂದು ಆರೋಪಿಸಿದರು.

ಜಾತಿ, ಉಪಜಾತಿ ಏಕೆ ಕೇಳುತ್ತೀರಿ? ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಿಗೆ ಸ್ಪಷ್ಟತೆಯೇ ಇಲ್ಲ. ಜಾತಿ ತೆಗೆದಿದ್ದೇವೆ ಅಂತಾರೆ, ಕೆಲವು ಉಳಿಸಿಕೊಂಡಿದ್ದಾರೆ. ತೆಗೆದಿರುವ ಜಾತಿಗಳ ಹೆಸರು ಹೇಳಿದರೂ ಬರೆದುಕೊಳ್ತೇವೆ ಅಂದಿದ್ದಾರೆ. ಯಾಕೆ ಈ ಗೊಂದಲ ಮೂಡಿಸುವ ಕೆಲಸ. ಸಾಮಾಜಿಕ ಆರ್ಥಿಕ ಸಮೀಕ್ಷೆ ಅಂದ ಮೇಲೆ ಜಾತಿ, ಉಪ ಜಾತಿ ಇನ್ನೊಂದು ಜಾತಿ ಅಂತ ಯಾಕೆ ಕೇಳ್ತೀರಿ?. ಸೊನಿಯಾ ಗಾಂಧಿ ಮಾರ್ಗದರ್ಶನದ ಮೇರೆಗೆ ಈ ಜಾತಿ ಗಣತಿ ನಡೆಯುತ್ತಿದೆ. ವಿವಿಧ ಜಾತಿ ಸಮುದಾಯಗಳಿಗೆ ಸಮೀಕ್ಷೆಯಿಂದ ಅಪಮಾನವಾಗಿದೆ. ಸಚಿವರಿಗೆ ಗೌರವ ಇದ್ರೆ ಸಂಪುಟ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ಸಮುದಾಯಗಳು ಕಾಂಗ್ರೆಸ್ ಸಚಿವರು, ಶಾಸಕರಿಗೆ ಕ್ಷಮಿಸಲ್ಲ ಎಂದು ಟೀಕಿಸಿದರು.

- Advertisement - 

ಕ್ರಿಶ್ಚಿಯನ್ ಮಿಷನರಿ ಕೈವಾಡ:
ಕ್ರಿಶ್ಚಿಯನ್ ಮಿಷನರಿಗಳ ಕೈವಾಡ ಈ ಸಮೀಕ್ಷೆ ಹಿಂದೆ ಇದೆ. ಇದು ಸರ್ಕಾರದ ಪ್ರಾಯೋಜಕತ್ವದ ಸಮೀಕ್ಷೆ. ಇದಕ್ಕೆ ಸಿದ್ದರಾಮಯ್ಯ ಅವರೇ ರಾಯಭಾರಿ. ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಗಾಂಧಿ ಅವರ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ತಮ್ಮ ಅಧಿಕಾರದ ಲಾಲಸೆಗೆ ಸನಾತನ ಹಿಂದೂ ಧರ್ಮ ಮಲಿನ ಮಾಡಲು ಹೊರಟಿದ್ದಾರೆ. ನೂರು ಸಿದ್ದರಾಮಯ್ಯ ಬಂದರೂ ಹಿಂದೂ ಧರ್ಮ ಅಪವಿತ್ರ ‌ಮಾಡಲು ಆಗಲ್ಲ. ಇನ್ನೆರಡು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತೆ. ನಂತರ ಅವರ ಈ ಸಮೀಕ್ಷೆಯನ್ನು ಯಾರೂ ಕೇಳೋರು ಇರಲ್ಲ. ಈಗ ಸಿದ್ದರಾಮಯ್ಯ ಏನು ಮಾಡಲು ಹೊರಟಿದ್ದಾರೋ ಇದು ಅಧಿಕೃತ ಅಲ್ಲ ಎಂದು ಪ್ರತಿಪಕ್ಷ ನಾಯಕ ಹೇಳಿದರು.

ಈ ಜಾತಿ ಸಮೀಕ್ಷೆ ಅಧಿಕೃತ ಅಲ್ಲ. ಈ ಸಮೀಕ್ಷೆ ಕೋರ್ಟ್​ನಲ್ಲಿ ನಿಲ್ಲಲ್ಲ. ಇದು ಅಸಾಂವಿಧಾನಿಕ ಸಮೀಕ್ಷೆ. ಸಾಮಾಜಿಕ ಸಮೀಕ್ಷೆಗೆ ಜಾತಿ ಯಾಕೆ ಕೇಳ್ತೀರಿ?. ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಧರ್ಮ ಒಡೆಯಲು ರಾಜ್ಯವನ್ನು ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಹೆಡ್ ಮಾಸ್ಟರ್. ಒಂದೊಂದೇ ರಾಜ್ಯದಲ್ಲಿ ಹಿಂದೂ ಧರ್ಮ ಒಡೆಯುವ ಕೆಲಸ ಇದು. ಈಗಾಗಲೇ ಗಣೇಶ ಹಬ್ಬದಲ್ಲಿ ನಿರ್ಬಂಧ ಹಾಕಿದ್ರು. ಮುಂದಿನ ಸಲ ಗಣೇಶ ಹಬ್ಬವೇ ಇಲ್ಲ ಅಂತಾರೆ. ಹಿಂದೂಗಳ ಸಂಖ್ಯೆ ಕಡಿಮೆ ಮಾಡೋದು, ದೇವಸ್ಥಾನಗಳ ಮಲಿನ ಮಾಡೋದು, ಮತಾಂತರ ಹೆಚ್ಚಿಸುವುದು ಈ ಮೂರು ಅಜೆಂಡಾ ಕಾಂಗ್ರೆಸ್​​ದಾಗಿದೆ ಎಂದು ಅವರು ದೂರಿದರು.

ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಇದಕ್ಕೆ ನಮ್ಮ ಸ್ವಾಗತ ಇದೆ. ಹೆಡ್ ಲೈನ್ ರಾಮಾಯಣ, ಒಳಗೆಲ್ಲ ಇಸ್ಲಾಂ ಬಗ್ಗೆ ಮಾಹಿತಿ. ಈ ತರಹದ ಸಮೀಕ್ಷೆ ಇದು. ಕಾಂತರಾಜ್ ಆಯೋಗಕ್ಕೆ 180 ಕೋಟಿ ನುಂಗಿದ್ರಲ್ಲ, ಎಲ್ಲಿ ಹೋಯ್ತು ಅದು?. ಈಗ 425 ಕೋಟಿ ರೂಪಾಯಿ ಖರ್ಚು ಮಾಡಲು ಹೊರಟಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಸಮೀಕ್ಷೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಟೂಲ್ ಕಿಟ್ ರೆಡಿ: ಆಳಂದ ಮತ ಅಕ್ರಮ ಕೇಸ್ ಎಸ್ಐಟಿ ತನಿಖೆಗೆ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ರಾಜ್ಯದಲ್ಲಿ ಟೂಲ್ ಕಿಟ್ ರೆಡಿ ಮಾಡಿದ್ದಾರೆ. ಹಿಂದೂಗಳನ್ನು, ಚುನಾವಣಾ ಆಯೋಗವನ್ನು ಮಲಿನ ಮಾಡುವ ಟೂಲ್ ಕಿಟ್ ಇದು. ಒಂದೊಂದೇ ಇಟ್ಕೊಂಡು ಆದೇಶ ಮಾಡ್ತಿದ್ದಾರೆ ಎಂದು ಟೀಕಿಸಿದರು.

ಧರ್ಮಸ್ಥಳ ಮುಚ್ಚುವ ಕೆಲಸಕ್ಕೆ ಮುಂದಾಗಿದೆ: ದಸರಾ ಉದ್ಘಾಟನೆ ಸಂಬಂಧ ಪ್ರತಿಕ್ರಿಯಿಸಿ, ”ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನು ಕರೆತಂದು ದಸರಾ ಉದ್ಘಾಟಿಸುವ ಅಗತ್ಯ ಏನು. ಧರ್ಮಸ್ಥಳ ಮುಚ್ಚುವ ಕೆಲಸಕ್ಕೂ ಸರ್ಕಾರ ಮುಂದಾಗಿದೆ. ಇದೆಲ್ಲ ನಕ್ಸಲರ ಮಾರ್ಗದರ್ಶನ, ಅವರು ಹೇಳಿದಂತೆ ಇವರು ಕೇಳ್ತಿದ್ದಾರೆಎಂದು ಆರೋಪಿಸಿದರು.

5 ಲಕ್ಷ ರಸ್ತೆ ಗುಂಡಿಗಳಿವೆ:
ಬೆಂಗಳೂರಲ್ಲಿ ಇಡೀ ರಸ್ತೆಗಳೇ ಗುಂಡಿಗಳಾಗಿವೆ. ರಸ್ತೆ ಗುಂಡಿಗಳಿಗೆ ಸರ್ಕಾರ ಕಾರಣ. ಅಧಿಕಾರಿಗಳಿಗೆ ಸಿಎಂ ಬೈದು ಏನು ಪ್ರಯೋಜನ
?. ವಿಪಕ್ಷದವರಿಗೆ 25 ಕೋಟಿ‌ಕೊಟ್ಟಿರೋದಾಗಿ ಡಿಸಿಎಂ ಹೇಳಿದ್ದಾರೆ. ಅದು ಟೆಂಡರ್ ಆಗಿ ಸರ್ಕಾರದ ಅನುಮತಿ ಪಡೆದು ಬರಬೇಕಲ್ಲ. ಬೆಂಗಳೂರಿನಲ್ಲಿ 5 ಸಾವಿರ ರಸ್ತೆಗುಂಡಿಗಳಿವೆ ಅಂತ ಡಿಕೆಶಿ ಹೇಳಿದ್ದಾರೆ. 5 ಸಾವಿರ ಅಲ್ಲ, 5 ಲಕ್ಷ ರಸ್ತೆಗುಂಡಿಗಳು ನಗರದಲ್ಲಿವೆ. ಇಡೀ ರಸ್ತೆಗಳನ್ನೇ ಸರಿ ಮಾಡಬೇಕು. ರಸ್ತೆಗುಂಡಿಗಳನ್ನು ಮುಚ್ಚಲು ಸಾಧ್ಯವೇ ಇಲ್ಲ. ಹೊಸದಾಗಿಯೇ ರಸ್ತೆಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.

 

 

Share This Article
error: Content is protected !!
";