ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾರಿಕಣಿವೆ ಜಲಾಶಯಕ್ಕೆ ಬಾಗಿನ ಬಿಡುವ ವೇಳೆ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್ ರವರಿಗೆ ಆಹ್ವಾನ ನೀಡದಿರುವುದಕ್ಕೆ ಹಿರಿಯೂರು ಮಾದಿಗ ಮಹಾ ಸಭಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮದಲ್ಲಿ ನಿಗಮ ಮಂಡಳಿ ಅಧ್ಯಕ್ಷರ ಆಹ್ವಾನಿಸುವುದು ಕಡ್ಡಾಯ. ಜಿಲ್ಲೆಯ ಎಲ್ಲ ಶಾಸಕರಿಗೆ ಬಾಗಿನ ಸಮರ್ಪಣೆ ಕಾರ್ಯಕ್ಕೆ ಆಹ್ವಾನ ನೀಡಿ ಜಿ ಎಸ್ ಮಂಜುನಾಥ್ ರವರನ್ನು ಮರೆತಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ.
ಇದು ಅಧೀಕೃತ ಸರ್ಕಾರಿ ಕಾರ್ಯಕ್ರಮವಾಗಿದ್ದಲ್ಲಿ ಜಿಲ್ಲಾಧಿಕಾರಿಗಳು ಸಕಾರಣ ನೀಡಬೇಕು ಮತ್ತು ಕಾರ್ಯಪಾಲಕ ಚಂದ್ರಪ್ಪ ಭಾರಿಕಾರ ಇವರನ್ನು ತತಕ್ಷಣ ಅಮಾನತ್ತು ಮಾಡಲು ಹಿರಿಯೂರು ಮಾದಿಗ ಮಹಾ ಸಭಾ ಅಗ್ರಹಿಸಿದೆ ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲು ಜಿ ಎಸ್ ಅಭಿಮಾನಿ ಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಡಿ ಸಣ್ಣಪ್ಪ, ಜಿ ಎಲ್ ಮೂರ್ತಿ, ಡಾ ಜಿ ಆರ್ ಸುಜಾತಾ, ಕೃಷ್ಣಮೂರ್ತಿ ಕೃಷ್ಣಪುರ, ದಯಾನಂದ ಹರ್ತಿ ಕೋಟೆ, ಕಲ್ಲಹಟ್ಟಿ ಹರೀಶ್, ಪ್ರದೀಪ್, ಸುರೇಶ್ ಯಳನಾಡು, ಚಂದ್ರಪ್ಪ, ಘಾಟ್ ಓಂಕಾರಪ್ಪ, 19 ನೇ ವಾರ್ಡ್ ಮಂಜುನಾಥ್, ಕುಮಾರ್ ದೊಡ್ಡಘಟ್ಟ, ಚಂದ್ರಪ್ಪ, ಲಕ್ಷ್ಮಣ್ ರವ್, ಶಂಕರ್ ಗಜ ವಕೀಲರು ನಾಗರಾಜ್, ನಿತಿನ್, ಭರತ್, ಮಂಜುನಾಥ್, ತಿಪ್ಪೇಸ್ವಾಮಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

