ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿ ಶಿರವಾರ ಗ್ರಾಮದದಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ದಾರ ಅಂಗವಾಗಿ ಬಸ ವೇಶ್ವರಸ್ವಾಮಿಗೆ ಮಹಾ ರುದ್ರಾಭಿಷೇಕ ನಡೆಯಿತು.
ದೇವಾಲಯದಲ್ಲಿ ಮುಂಜಾನೆ ಯಿಂದ ವಿಶೇಷ ಅಲಂಕಾರ ಪೂಜಾ ಕೈಂ ಕಾರ್ಯಗಳು ನೆಡೆದವು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿ, ನಿರ್ಮಲ ಮನಸಿನಿಂದ ದೇವರ ಅರಾಧನೆ ಮಾಡುವ ಮೂಲಕ ದೈವದ ಕೃಪೆಗೆ ಪಾತ್ರರಾಗುತ್ತಾರೆ ಹಾಗು ಧಾರ್ಮಿಕ ನೆಲೆಗಟ್ಟಿನಲ್ಲಿ ಉತ್ತಮ `ಸಮಾಜ ನಿರ್ಮಾಣ ಮಾಡಬೇಕಿದೆ.
ಆತ್ಮ ಶುದ್ದಿ ನಿಷ್ಕಲ್ಮಶ ಮನಸ್ಸು ಭಕ್ತಿ ಭಾವನೆಗಳ ಜಾಗೃತಿ ಮೂಡಿಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ. ಸತ್ಕಾರ್ಯ, ಸೇವಾ ಕಾರ ಗಳೊಂದಿಗೆ ಜಗತ್ತಿಗೆ ಒಳಿತನ್ನು ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕಿದೆ.
ಮನುಷ್ಯ ಕಷ್ಟಗಳಿಗೆ ಒಳಗಾದಾಗ ಮನುಷ್ಯರು ದೇವರ ಮೊರೆ ಹೋಗುವುದು ಸಹಜ. ಆದರೆ ಮನ ಶಾಂತಿಗಾಗಿ ದಿನಕ್ಕೆ ಒಂದು ಬಾರಿ ದೇವಾಲಯಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದು ಮೂಲಕ ಅರ್ಧ ತಾಸು. ದೇವರ ಧ್ಯಾನದಲ್ಲಿ ಮಾಡುವುದು ಮುಖ್ಯ ಎಂದರು.

