ಜೀ಼ ಕನ್ನಡ ವಾಹಿನಿಯಲ್ಲಿ ಇದೇ 14 ರಿಂದ ಮಹಾನಟಿ ಸೀಸನ್ 2

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಮಿಡಿ ಕಿಲಾಡಿಗಳು, ಸರಿಗಮಪ, ಡಾನ್ಸ್ ಕರ್ನಾಟಕ ಡಾನ್ಸ್, ಭರ್ಜರಿ ಬ್ಯಾಚುಲರ್ಸ್, ಮಹಾನಟಿ ಸೀಸನ್ 1 ನಂತಹ ಹಿಟ್ ರಿಯಾಲಿಟಿ ಶೋಗಳ ಸರ್ದಾರ ಜೀ ಕನ್ನಡ ಈಗ ಮತ್ತೊಂದು ರಿಯಾಲಿಟಿ ಶೋ ನ ನಿಮ್ಮ ಮಡಿಲಿಗೆ ಇಡಲು ಸಜ್ಜಾಗಿದೆ. ಮಹಾನಟಿ ಸೀಸನ್ 1 ನ ಅತೀ ದೊಡ್ಡ ಸಕ್ಸಸ್ ನಂತರ ಈಗ ಮಹಾನಟಿ ಸೀಸನ್ 2 ನಿಮ್ಮನ್ನು ಮನರಂಜಿಸಲು ಬರ್ತಿದೆ ಇದೆ ಜೂನ್ 14 ರಿಂದ ಸಂಜೆ 7:30ಕ್ಕೆ.

- Advertisement - 

2024 ನಲ್ಲಿ ನಡೆದ ಮಹಾನಟಿ ಸೀಸನ್ 1 ಜನಮನ ಗೆದ್ದಿದ್ದು ಆ ಆವೃತ್ತಿಯ ವಿಜೇತೆ ಸ್ಯಾಂಡಲವುಡ್ ನ ಹಿಟ್ ನಿರ್ದೇಶಕ ತರುಣ್ ಸುಧೀರ್ ಅವರ ಚಿತ್ರದಲ್ಲಿ ನಾಯಕನಟಿ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಸ್ಪರ್ಧಿಗಳು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿ ಇದ್ದಾರೆ. ಇನ್ನು ಮಹಾನಟಿ ಸೀಸನ್ 2 ನಲ್ಲಿ 18-25 ವಯಸ್ಸಿನ 12 ಪ್ರತಿಭಾವಂತ ಯುವತಿಯರು ಭಾಗವಹಿಸಲಿದ್ದಾರೆ.

- Advertisement - 

ಇನ್ನು 18 ವಾರಗಳ ಕಾಲ ಇವರಿಗೆ ರಂಗಭೂಮಿ ಕಲಾವಿದರು, ತಾಂತ್ರಿಕ ತಜ್ಞರಿಂದ ತರಬೇತಿ ಸಿಗಲಿದೆ. ಇನ್ನು ಈ 18 ವಾರಗಳಲ್ಲಿ ವಿಭಿನ್ನ ರೀತಿಯ ರೌಂಡ್ಸ್ ನಡೆಯಲಿದ್ದು ಯಾರು ಹೇಗೆ ನಟಿಸುತ್ತಾರೆ, ಯಾರು ತೀರ್ಪುಗಾರರ ಮನಗೆಲ್ಲಲಿದ್ದಾರೆ ಎಂದು ಕಾದು ನೋಡ್ಬೇಕಿದೆ.

ಮಹಾನಟಿ ಸೀಸನ್ 2 ನಲ್ಲಿ  ಚೆಂದುಳ್ಳಿ ಚೆಲುವೆ ನಿಶ್ವಿಕಾ ನಾಯ್ಡು, ಎವರ್ಗ್ರೀನ್ ನಟಿ ಪ್ರೇಮಾ ಮತ್ತು ಕನ್ನಡಕ್ಕೆ ಹಿಟ್ ಸಿನಿಮಾಗಳನ್ನು ಕೊಡುತ್ತಿರುವಂತಹ ತರುಣ್ ಸುಧೀರ್ ಅವರು ತೀರ್ಪುಗಾರರಾಗಿ ತೀರ್ಪನ್ನು ನೀಡಲಿದ್ದಾರೆ.

- Advertisement - 

 ಕನ್ನಡ ಹೆಸರಾಂತ ನಟ ರಮೇಶ್ ಅರವಿಂದ್ ಅವರು ಈ ಶೋ ನ ಮಾಸ್ಟರ್ ಮೈಂಡ್ ಆಗಿದ್ದು ಸ್ಪರ್ಧಿಗಳಿಗೆ ಮಾಸ್ಟರ್ ಕ್ಲಾಸ್ ಗಳ ಜೊತೆಗೆ ಚಿತ್ರರಂಗದಲ್ಲಿ ತಮಗಿರುವ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಇನ್ನು ಕನ್ನಡಿಗರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಅವರು ನಿರೂಪಣಾ ಜವಾಬ್ದಾರಿ ಹೊತ್ತಿದ್ದಾರೆ.

ನಟಿಯಾಗಬೇಕೆಂದು ಕನಸುಗಳನ್ನು ಹೊತ್ತುಕೊಂಡಿರುವ ಸ್ಪರ್ಧಿಗಳಿಗೆ ಮಹಾನಟಿ ವೇದಿಕೆ ಒಂದು ಒಳ್ಳೆಯ ಅವಕಾಶ ಕೊಡುತ್ತದೆ ಎಂಬುದಕ್ಕೆ ಕಳೆದ ಸೀಸನ್ ನ ಯಶಸ್ಸೇ ಸಾಕ್ಷಿ. ಸ್ಪರ್ಧಿಗಳು ಯಾರ್ಯಾರು? ಹೇಗಿರಲಿದೆ ಮಹಾನಟಿ ಸೀಸನ್ 2 ಇವೆಲ್ಲದಕ್ಕೂ ಉತ್ತರ ಸಿಗಲಿದೆ ಇದೆ ಜೂನ್ 14 ರಂದು ಸಂಜೆ 7:30 ಕ್ಕೆ.

 

Share This Article
error: Content is protected !!
";