ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕದ ಗಡಿ ಬಾಗ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿ ಪುಂಡರು ಕ್ರೂರವಾಗಿ ಅಟ್ಟಹಾಸ ಮಿತಿ ಮೀರಿದ್ದರೆ, ಇತ್ತ ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಯಿಂದ ಮಹಾರಾಷ್ಟ್ರದ ವಾಹನಗಳ ಚಾಲಕರನ್ನು ಸನ್ಮಾನಿಸಿ, ಸಿಹಿ ತಿನ್ನಿಸಿ, ಗುಲಾಬಿ ಹೂ ನೀಡಿ ಸೌಹಾರ್ದತೆ ಮೆರೆಯುತಿದ್ದಾರೆ.
ದೇವನಹಳ್ಳಿ- ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ವಾಹನಗಳನ್ನು ತಡೆದ ಕರವೇ ಪ್ರವೀಣ್ ಕುಮಾರ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದ ಕಾರ್ಯಕರ್ತರು ಮಹಾರಾಷ್ಟ್ರದ ಚಾಲಕ, ನಿರ್ವಾಹಕರನ್ನು ಗೌರವಿಸಿ, ಸಿಹಿ ನೀಡಿ, ಹೂ ನೀಡಿ ಭಾಷೆ ವಿಚಾರದಲ್ಲಿ ಕಿಡಿಗೇಡಿಗಳ ಕುಕೃತ್ಯದಿಂದ ಭಾವೋದ್ರೇಕಕ್ಕೆ ಒಳಗಾಗದೆ ನಾವೆಲ್ಲ ಭಾರತೀಯ ಪ್ರಜೆಗಳು ಎಂಬುದನ್ನ ಮರೆಯಬಾರದು ಎಂದು ಹೇಳುವ ಮೂಲಕ ಶಾಂತಿ ಸಂದೇಶ ಸಾರಿದರು.
ಕರವೇ ಮುಖಂಡ ರಾಜಘಟ್ಟ ರವಿ ಮಾತನಾಡಿ, ‘ಮರಾಠಿ ಬರೋದಿಲ್ಲ ಎಂಬ ಕಾರಣಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಅಗತ್ಯವಾಗಿದೆ. ಹಾಗೆಂದು ಇತರೆ ಚಾಲಕರನ್ನು, ನಿರ್ವಾಹಕರನ್ನು ಅವಮಾನಿಸುವುದು ಸರಿಯಲ್ಲ, ನಾವೆಲ್ಲ ಒಕ್ಕೂಟದ ವ್ಯವಸ್ಥೆಯಲ್ಲಿ ಒಂದೇ ದೇಶದ ಮಕ್ಕಳು. ಚಾಲಕ, ನಿರ್ವಾಹಕರು ಹೊಟ್ಟೆ ಪಾಡಿಗಾಗಿ ಜೀವನ ನಡೆಸುತ್ತಾರೆ. ಅಂತವರ ಮೇಲೆ ದರ್ಪ ತೋರುವುದು ಸರಿಯಲ್ಲ‘ ಒಂದೇ
ದೇಶ ಒಂದೇ ಆಧಾರ್ ಎಲ್ಲಾ ಒಂದೆ ಎಂದ ಮೇಲೆ ಈ ಕೃತ್ಯ ಭಾರತ ದೇಶಾಭಿಮಾನ ಇರಬೇಕು ಅದರೆ ಈ ತರಹದ ಕೃತ್ಯ ಸರಿಯಲ್ಲ ಎಂದರು.
ಕನ್ನಡಿಗರು ದೇಶಾಭಿಮಾನ ದಿಂದ ಎಲ್ಲರನ್ನು ಸ್ವಂತ ಅಣ್ಣ ತಮ್ಮನ ಭಾವನಗಳಿಂದ ಗಡಿಯಲ್ಲಿ ಸಹೋದರ ಬೆಳವಣೆಗೆ ಇರಬೇಕು ಕನ್ನಡಿಗರು ಪುಂಡತನದ ಕೆಲಸ ಮಾಡುವುದಿಲ್ಲ ಎಂಬುದನ್ನು ದೇಶದ ಎಲ್ಲಾ ರಾಜ್ಯದವರಿಗೆ ತಿಳಿಸುವಂತೆ ಹೇಳಿದರು.