ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಭೀಮನಬಂಡೆಯ ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ವಿದ್ಯಾಭ್ಯಾಸದ ಜೊತೆಗೆ ಕತೆ, ಕಾದಂಬರಿ, ಸಾಹಿತ್ಯಗಳಲ್ಲಿ ಆಸಕ್ತಿ ತೋರಿ ತಮ್ಮ ಸೃಜನಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದು ಕಾಲೇಜಿನ ಆಡಳಿತಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ವಾಲ್ಮೀಕಿ ಋಷಿಮುನಿಗಳ ಜೀವನ ಚರಿತ್ರೆ ಮತ್ತು ಮಹಾಕಾವ್ಯ ರಾಮಾಯಣ ಕುರಿತು ಮಾತನಾಡಿದ ಪ್ರಾಂಶುಪಾಲ ವೇಣುಕುಮಾರ್ ವಿದ್ಯಾರ್ಥಿಗಳು ಮಹಾನ್ ಸಾಧಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕನ್ನಡ ಉಪನ್ಯಾಸಕ ಶಿವಾನಂದ್ ಋಷಿಮುನಿಗಳ ತಪಸ್ಸು ಮತ್ತು ಕಾವ್ಯ ರಚನೆ ಕುರಿತು ಮಾತನಾಡಿದರು.
ತೇಜಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೇತ್ರಾವತಿ ವಂದಿಸಿದರು. ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಶ್ರೀಷನ್, ಉಪನ್ಯಾಸಕರಾದ ಹರ್ಷ, ಪ್ರವೀಣ್, ಮಹಾಂತೇಶ್, ಸುಗುಣ, ವರದೇಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

