ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ, ತಾಲ್ಲೂಕು, ಅರಳುಮಲ್ಲಿಗೆ ಇತ್ತೀಚಿಗೆ ನೂತನವಾಗಿ ನಿರ್ಮಾಣಗೊಂಡ ಶ್ರೀ ನಗರ ಕುಲ ಹಾಲುಮತ ಕುರುಬ ಜನಾಂಗದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಮೂರನೇ ವಾರ್ಷಿಕೋತ್ಸವದ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 10.11.24ರ ಭಾನುವಾರ ಗಂಗಾಪುಜೆ, ಗೋ ಪೂಜೆ, ಕೌತುಕ ಬಂಧನ, ಗಣಪತಿ ಪೂಜೆ, ಪುಣ್ಯಾಹ ವಾಚನ, ಶುದ್ದಿಕರ್ಮ, ಯಾಗಮಂಟಪ ಶುದ್ದಿ, ರಕ್ಷಾ ಹೋಮ, ಕಳಶಸ್ಥಾಪನೆ, ವಾಸ್ತು ಹೋಮ, ಅಘೋರಾಸ್ತ್ರ ಹೋಮ, ಪೂರ್ಣಹುತಿ ನಡೆಯಿತು. ಸೋಮವಾರ ಗಣಪತಿ ಪೂಜೆ, ಪುಣ್ಯಾಹ ವಾಹನ, ದೇವನಾಂದಿ, ತತ್ವ ಹೋಮ, ಕಲಾವೃದ್ಧಿ ಹೋಮ, ರುದ್ರಾಭಿಷೇಕ, ಮಹಾಪೂರ್ಣಹುತಿ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದ ಬಗ್ಗೆ ದೇವಾಲಯದ ಅರ್ಚಕ ಮಲ್ಲಯ್ಯ ಮಾತನಾಡಿ ಶ್ರೀ ಗಂಗ ಮಾಳಮ್ಮ, ತುಪ್ಪದ ಮಾಳಮ್ಮ ಪತ್ನಿಯರ ಸಮೇತ ನೆಲೆಗೊಂಡ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ ಮೂಲತಹ ಸುಕ್ಷೇತ್ರ ಮೈಲಾರದಿಂದ ಬಂದಿದ್ದು, ಸುಕ್ಷೇತ್ರದ ಗುರುಗಳಾದ
ಶ್ರೀ ವೆಂಕಪ್ಪ ಒಡೆಯರ್ ರವರ ಅಣತಿಯಂತೆ ಅರಳು ಮಲ್ಲಿಗೆ ಗ್ರಾಮದ ಹೊರವಲಯದಲ್ಲಿ ನೂತನವಾಗಿ ಶ್ರೀ ಸ್ವಾಮಿಯ ದೇವಾಲಯ ನಿರ್ಮಾಣ ಗೊಂಡು ಮುರುವರ್ಷ ವಾಗಿದ್ದು ಈಗ ಮೂರನೇ ವರ್ಷದ ವಾರ್ಷಿಕ ಮಹೋತ್ಸವವನ್ನು ಸುಕ್ಷೇತ್ರ ಮೈಲಾರದ ಪ್ರದಾನ ಅರ್ಚಕರಾದ ಶ್ರೀ ಪ್ರಮೋದ ಬಟ್ಟರ ನೇತೃತ್ವದಲ್ಲಿ ಪೂಜಾ ವಿದಿ ವಿಧಾನಗಳು ನಡೆದಿದ್ದು ಅಪಾರ ಸಂಖ್ಯೆಯ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಯಾಗಲು ಕಾರಣ ಕರ್ತರಾಗಿದ್ದಾರೆ ಎಂದು ಹೇಳಿದರು.
ಟ್ರಸ್ಟ್ ನ ಸಹಕಾರ್ಯದರ್ಶಿ ಆಲಳ್ಳಿ ಅಶ್ವಥ್ನಾರಾಯಣ್ ಮಾತನಾಡಿ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ವಾರ್ಷಿಕ ಮಹೋತ್ಸವ ಕಾರ್ತೀಕಮಾಸದಲ್ಲಿ ನಡೆಯಲಿದ್ದು ಎರಡು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮ ಶ್ರೀ ಕ್ಷೇತ್ರ ಮೈಲಾರದ ಪ್ರದಾನ ಅರ್ಚಕರಾದ ಪ್ರಮೋದ್ ಬಟ್ಟರ ನೇತೃತ್ವದಲ್ಲಿ ಯಜ್ಞ, ಹೋಮ ಹವನ, ಪೂಜಾ ವಿಧಿ ವಿಧಾನಗಳು ನಡೆದಿದ್ದು,
ಇದರಲ್ಲಿ ಕುರುಬ ಸಮುದಾಯ ಮಾತ್ರವಲ್ಲದೆ ಸರ್ವ ಸಮುದಾಯಗಳ ನಾಗರಿಕರು, ಬಕ್ತಾದಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮುಖ್ಯವಾಗಿ ನೂತನ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ಸಮುದಾಯದ ಬಕ್ತಾದಿಗಳು ಕೈ ಜೋಡಿಸಿ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ದೇವತಾ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಕುಲದ ಯಜಮಾನರುಗಳು ಹಾಗೂ ಬಕ್ತಾದಿಗಳು ಎರಡು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದರು.