ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ತಾಲೂಕಿನ ಕಾನ ಹೊಸಹಳ್ಳಿ ಸಮೀಪ ಜುಮ್ಮೋನಹಳ್ಳಿ ಗ್ರಾಮದ ಶಶಿಕುಮಾರ ಇವರ ಕಣದಲ್ಲಿ ಇವರಿಗೆ ಸೇರಿದ ಮೂರು ಲಕ್ಷ ರೂ. ಅಂದಾಜು ಮೌಲ್ಯದ 3 ಟ್ಯಾಕ್ಟರ್ ಲೋಡ್ ಮೆಕ್ಕೆಜೋಳದ ಸಪ್ಪೆ ಬಣವಿ, 1 ಲೋಡು ಶೇಂಗಾ ಹೊಟ್ಟು, ಸೇರಿದಂತೆ ಒಂದು ಲೋಡ ರಾಗಿ ಬಣವೆ ಬೆಂಕಿಗೆ ಆಹುತಿಯಾಗಿರುವ ಘಟನೆ ವರದಿಯಾಗಿದೆ.
ಮೆಕ್ಕೆಜೋಳದ ಹೊಟ್ಟುನ ಬಣವಿ ಬೆಂಕಿ ಕೆನ್ನಾಲಿಗೆಯೊಂದಿಗೆ ಧಗ, ಧಗಿಸಿ ಉರಿಯುತ್ತಿರುವುದನ್ನು ನೋಡಿ ರೈತ ಕಂಗಾಲಾಗಿದ್ದಾನೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ಇದರಿಂದ ಅಗ್ನಿಶಾಮಕ ದಳದವರು ಬರುವ ಹೊತ್ತಿಗೆ ಸುಮಾರು 3 ಟ್ಯಾಕ್ಟರ್ ಲೋಡ್ ಮೆಕ್ಕೆಜೋಳದ ಸಪ್ಪೆ ಬಣವಿ ಒಂದು ಲೋಡು ರಾಗಿಣಿ ಬಣವೆ ಸಂಪೂರ್ಣ ಭಸ್ಮವಾಗಿದೆ. ಪರಿಹಾರಕ್ಕಾಗಿ ರೈತ ಶಶಿಕುಮಾರ್ ಕೋರಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಕೆ.ಶರಣಬಸವ ರೆಡ್ಡಿ, ಚಾಲಕ ಹರಿಕೃಷ್ಣ, ಸಿಬ್ಬಂದಿಗಳಾದ, ಮಹೇಶ್, ರವಿ, ಅಜಯ್, ಕಾಶಿನಾಥ್, ಸೇರಿದಂತೆ ಗ್ರಾಮದ ಮುಖಂಡರು ಬೆಂಕಿ ನಂದಿಸುವ ಕಾರ್ಯ ಮಾಡಿದರೂ ಪ್ರಯೋಜನ ಆಗಲಿಲ್ಲ ಎಂದು ಸಿ.ಅರುಣ್ ಕುಮಾರ್ ತಿಳಿಸಿದ್ದಾರೆ.