ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
MAKE A ಮರಿ
ಚಿನ್ನ ರನ್ನ
ಬಿಳಿ, ಕಂದು, ಕಪ್ಪು ಬಣ್ಣ
ಸಣಕಲು ಸಣ್ಣ
ಪುಟಿವೆ ,ಕುಣಿ ಕುಣಿದು
ಕುಪ್ಪಳಿಸುತ ನಡೆವೆ
ದೂರ ದೂರಕೆ ಸಾಗಿ
ಅರಸಿ ಹೊರಡುವೆ
ಮೇವಿಗಾಗಿ
ಗುಟುಕು ನೀರಿಗಾಗಿ
ತಲ್ಲಣ ತೋರದೆ
ತಣಿವೆ ನೀರ್
ನೆರಳು ಕಂಡಾಗ
ದಣಿವಾರಿಸಿ
ಮುನ್ನಡೆವೆ
ಕುರಿಗಾಹಿಯ
ಆಣತಿ ಮೆರೆದು
ಮ್ಯ… May.. May
ಎನುತ ಸಾಗಿ
ಧೂಳೆಬ್ಬಿಸುತ
ಗಿಡ ಗಂಟಿಗಳ
ಹರಿ ತರಿದು
ಚಿಗುರ ತಿನ್ನುತ
ವರುಷೋರುಷಕ್ಕೆ
ಬೆಳೆವೆ
ಕಟುಕರ ಕಣ್ಣ
ನೆಂಟ ಬೆಳೆಸಿ
ಕೊಕ್ಕೆಗೆ ಸಿಕ್ಕಿ
ಉಣ್ಣುವವರ
ಪಾಲಿನ
ಮೃಷ್ಟನ್ನವಾಗುವ
ಜಗದರಿವಿರದ
ಜೀವದ ಜೊತೆಗಾರನಾಗಿ
ಬರುತಲೆ ಇರುವೆ
MAKE A ಮರಿಯಾಗಿ
ರಚನೆ: ಗುರಾನಿ 9036389240