ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಲಬಾರ್ ಮುಸ್ಲಿಂ ಅಸೋಸಿಯೇಷನ್‌ಆಯೋಜಿಸಿದ್ದ ಅಸೋಸಿಯೇಷನ್‌ನ 90ನೇ ವರ್ಷದ ವಾರ್ಷಿಕೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗವಹಿಸಿ ಮಾತನಾಡಿದರು.
40 ವರ್ಷಗಳಿಂದ ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಮೊಹಮದ್ ಅವರು ಕೊಡುಗೈ ದಾನಿ, ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರಿನಲ್ಲಿರುವ ಮಲಬಾರ್ ಸಮುದಾಯದ ಜನ ನಮಗಿಂತ ಉತ್ತಮವಾಗಿ ಕನ್ನಡ ಮಾತನಾಡುತ್ತೀರಿ. ಅದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಸಜ್ಜನಿಕೆ, ಸಂಸ್ಕೃತಿ, ಪರಂಪರೆ ಹೊಂದಿದ್ದೀರಿ. ನಿಮ್ಮ ಆಚಾರ ವಿಚಾರವನ್ನು ಎಲ್ಲಿದ್ದರೂ ಬಹಳ ಗೌರವದಿಂದ ಕಾಪಾಡುವ ಶಕ್ತಿಯನ್ನು ಈ ಜನರಿಗೆ ಭಗವಂತ ನೀಡಿದ್ದಾನೆ ಎಂದು ಅವರು ತಿಳಿಸಿದರು.
ಮೊಹಮದ್ ಅವರು ಮೊದಲಿನಿಂದಲೂ ನಮ್ಮ ಪಕ್ಷಕ್ಕೆ ದೊಡ್ಡ ಆಸ್ತಿ. ಈ ಸಂಸ್ಥೆಯಲ್ಲಿ 40 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ಮೊಹಮದ್ ಅವರ ಸಾಧನೆ ಬದುಕು ಬಹಳ ವಿಶೇಷವಾದದ್ದು, ಎಲ್ಲಾ ಜನರ ಪ್ರೀತಿ ಗಳಿಸಿದ್ದಾರೆ. ಅವರ ಹೃದಯ ಶ್ರೀಮಂತಿಕೆಯನ್ನು ನಾನು ಕಂಡಿದ್ದೇನೆ. ಅವರು ಹ್ಯಾರೀಸ್ ಅವರಿಗಿಂತ ಮುಂಚಿತವಾಗಿ ರಾಜಕೀಯಕ್ಕೆ ಬರುವ ಅವಕಾಶವಿದ್ದರೂ ಉದ್ಯಮ ಬೆಳೆಸಿ, ಸಮಾಜಕ್ಕೆ ಕೊಡುಗೈ ದಾನಿಯಾಗಿ ಬೆಳೆದಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಶಿಕ್ಷಣ ಅವರ ಪ್ರೀತಿಪಾತ್ರ ಕ್ಷೇತ್ರ.
ಇದೇ ಸಂದರ್ಭದಲ್ಲಿ ಮಲಬಾರ್ ಮುಸ್ಲಿಂ ಅಸೋಸಿಯೇಷನ್‌ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಸೋಸಿಯೇಷನ್‌ನ 90ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ, ಶುಭ ಹಾರೈಸಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಎನ್.ಎ.ಹ್ಯಾರಿಸ್ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಮೆಹರೂಸ್ ಖಾನ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

