ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕದ ನಾನಾ ಜಾಗಗಳಿಂದ ಸಾವಿರಾರು ಅಯ್ಯಪ್ಪ ಸ್ವಾಮಿಗಳು ಮಾಲೆ ಧರಿಸಿ ಇರುಮುಡಿ ಹೊತ್ತುಕೊಂಡು ಚಿತ್ರದುರ್ಗದ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟಿರುತ್ತಾರೆ.
ನಗರದ ಜನತೆಗೆ ತಿಳಿಯಪಡಿಸುವುದೇನೆಂದರೆ ಕೇರಳದ ಶಬರಿಮಲೆಗೆ ಮಾಲೆ ಹಾಕಿಕೊಂಡು ಕಾರಣಾಂತಿಗಳಿಂದ ಹೋಗದೆ ಇರುವ ಭಕ್ತಾದಿಗಳಿಗೆ ಕರ್ನಾಟಕದ ಎರಡನೇ ಶಬರಿಮಲೆ ಎಂದು ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದ ಮದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜನವರಿ-13ರಂದು ಮಂಗಳವಾರ ಬೆಳಗ್ಗೆಯಿಂದ ಸಂಜೆ 4 ಗಂಟೆ ಒಳಗಡೆ ಇರುಮುಡಿ ಕಟ್ಟಿಸಿಕೊಂಡು ಅಯ್ಯಪ್ಪ ಸ್ವಾಮಿ ದೇವರ ಆಭರಣದ ಜೊತೆಗೆ ಮೆರವಣಿಗೆ ಮಾಡುವ ಮುಖಾಂತರ ನೀಲಕಂಠೇಶ್ವರ ದೇವಸ್ಥಾನ ದಿಂದ ಹೊರಟು ದೇವಸ್ಥಾನದಲ್ಲಿ ಇರುಮುಡಿ ಜೊತೆಗೆ 18 ಮೆಟ್ಟಿಲು ಹತ್ತಿ ದೇವರ ದರ್ಶನ ಮಾಡುವ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ.
ಹಾಗೂ ಜನವರಿ-14ರಂದು ಬೆಳಿಗ್ಗೆ 6 ಗಂಟೆಯಿಂದ10 ಗಂಟೆಯವರೆಗೆ ಅಯ್ಯಪ್ಪ ಸ್ವಾಮಿ ದೇವರ ಮಾಲೆ ಧರಿಸಿ ಇರುಮುಡಿ ಸಮೇತ ದರ್ಶನ ಮಾಡುವ ಒಂದು ಸುವರ್ಣ ಅವಕಾಶವನ್ನು ದೇವಸ್ಥಾನ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಾವಿರಾರು ಭಕ್ತಾದಿಗಳು ದೇವರ ಸನ್ನಿಧಾನದಲ್ಲಿ ಮಾಲೆ ಧರಿಸಿ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.
ಆದ್ದರಿಂದ ಈ ಅವಕಾಶವನ್ನು ಸದುಪಯೋಗ ಪಡಿಸಬೇಕಾಗಿ ಈ ಮೂಲಕ ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದ ಸಮಿತಿ ಅಧ್ಯಕ್ಷ ಶರಣ್ ಕುಮಾರ್, ಕಾರ್ಯದರ್ಶಿ ಎಂ ಪಿ ವೆಂಕಟೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ 9342310469 ಹಾಗೂ ಮ್ಯಾನೇಜರ್ 8880188188 ಸಂಪರ್ಕಿಸಲು ಕೋರಿದ್ದಾರೆ.

