ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ರಾಜಾಜಿನಗರದ ಶ್ರೀಮಲೆಮಹದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಮತ್ತು ಸಿದ್ಧಗಂಗಾ ಮಠದ ಪರಂಪರೆಯಂತೆ ಶ್ರೀಮಲೆಮಹದೇಶ್ವರಸ್ವಾಮಿಯ ರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಕುಟುಂಬವು ರಥೋತ್ಸವದಲ್ಲಿ ಭಾಗವಹಿಸಿತ್ತು.

