ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುಮಾರಿ ಪಿ ಧೃತಿ ಬೆಂಗಳೂರಿನ ಸಹಕಾರ ನಗರದಲ್ಲಿರುವ ಟ್ರೆಯೋ ವಿದ್ಯಾ ಸಂಸ್ಥೆಯಲ್ಲಿ 12 ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಟ್ರೆಯೋ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಬಿಸಿನೆಸ್ ಪಿಚ್ ಕಾಂಪಿಟೇಶನ್ ಪರೀಕ್ಷೆಯಲ್ಲಿ ಮೊದಲಿಗರಾಗಿ ತೇರ್ಗಡೆ ಹೊಂದಿರುವ ಇವರನ್ನು ಕೇಂಬ್ರಿಡ್ಜ್ ಯುನಿವರ್ಸಿಟಿ ಸ್ಕಾಲರ್ಷಿಪ್ ನೀಡುವ ಮೂಲಕ ಬ್ರಿಟಿಷ್ ದೇಶದ ರಾಜಧಾನಿ ಲಂಡನ್ ನಗರಕ್ಕೆ ಕರೆಸಿಕೊಳ್ಳುವರು.
ಜುಲೈ 21ರ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ನಗರಕ್ಕೆ ಧೃತಿ ತೆರಳುತ್ತಿದ್ದಾರೆ ಈ ವಿಚಾರದಲ್ಲಿ ಶುಭಹಾರೈಕೆಗಳು.
ವಿಶ್ವದ ಇನ್ನಿತರೇ ದೇಶಗಳ ಟ್ರೆಯೋ ವಿದ್ಯಾಸಂಸ್ಥೆಯ ವಿಧ್ಯಾರ್ಥಿಗಳು ಸೆಮಿನಾರ್ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳುತ್ತಾರೆ. 25 ದಿನಗಳ ಕಾಲ ಲಂಡನ್ ನಲ್ಲಿ ವಾಸ್ತವ್ಯಕ್ಕೆ ಕೇಂಬ್ರಿಡ್ಜ್ ವಿದ್ಯಾ ಸಂಸ್ಥೆ ವ್ಯವಸ್ಥೆ ಮಾಡಿಕೊಟ್ಟಿದೆ.
ಕುಮಾರಿ ಧೃತಿ ಅವರ ತಾಯಿ ಅನುಪಮ ಕೆಂಪಲಿಂಗಯ್ಯ ಅವರು ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದವರು. ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿದ್ದಾರೆ.