ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ಸಿನ ಒಳಜಗಳಕ್ಕೆ ಕೊನೆಮೊದಲು ಎಂಬುದಿಲ್ಲ. ರಾಜ್ಯ ಕಾಂಗ್ರೆಸ್ಸಿನ ನಟ್ಟು ಬೋಲ್ಟುಗಳನ್ನು ಬಿಗಿಗೊಳಿಸಲು ಸ್ವತಃ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರೇ ಫೀಲ್ಡಿಗೆ ಇಳಿದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಹಲಾಲ್ ಬಜೆಟ್ ಕೊನೆಯದ್ದಾಗಲಿದೆ ಎಂದು ಡಿ.ಕೆ ಶಿವಕುಮಾರ್ ಬಣ ಪ್ರತಿಪಾದಿಸುತ್ತಿದ್ದರೆ, ಇನ್ನೂ 3 ಬಜೆಟ್‌ಸಿದ್ದರಾಮಯ್ಯ ಅವರೇ ಮಂಡಿಸಲಿದ್ದಾರೆ ಎಂದು ಸಿದ್ದರಾಮಯ್ಯ ಬಣ ಹೇಳುವ ಮೂಲಕ ಎರಡೂವರೆ ವರ್ಷದ ಒಪ್ಪಂದವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ಎರಡೂ ಬಣಗಳಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ ಎಂದು ಬಿಜೆಪಿ ದೂರಿದೆ.
ಕಾಂಗ್ರೆಸ್ಸಿನ ಈ ಒಳಜಗಳದಿಂದ ರಾಜ್ಯದ ಆಡಳಿತ ಯಂತ್ರ ನಟ್ಟು ಬೋಲ್ಟುಗಳೂ ಕಳಚಿಕೊಂಡಿದೆ. ಅಭಿವೃದ್ಧಿ ಎನ್ನುವುದು ರಾಜ್ಯದಲ್ಲಿ ಮರೀಚಿಕೆಯಾಗಿದೆ. ಒಂದು ಕಡೆ ಬೆಲೆ ಏರಿಕೆ ಮತ್ತೊಂದು ಕಡೆ ಶೂನ್ಯ ಅಭಿವೃದ್ಧಿ, ಒಟ್ಟಿನಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ದಿವಾಳಿಗೊಳಿಸುತ್ತಿದೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.