ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಮಾಂಗಲ್ಯ ಭಾಗ್ಯ ಯೋಜನೆಯಡಿ ಸರಳ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ದಿನಾಂಕ ಮೇ-,07 ರಂದು ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಕಟಕ ಲಗ್ನದಲ್ಲಿ ಸಾಮೂಹಿಕ ಸರಳ ವಿವಾಹ ನೆಡೆಯಲಿದೆ ಎಂದು ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಬಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ಅರ್ಹತಾ ಫಲಾನುಭಾವಿಗಳು ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಅರ್ಜಿ ಪಡೆದು ಮಾರ್ಚಿ 31ರ ಒಳಗಾಗಿ ಸೂಕ್ತ ದಾಖಲೆಗಳೂಂದಿಗೆ ಸಲ್ಲಿಸಿ ನೊಂದಾಯಿಸಿಕೊಳ್ಳಬೇಕು.
ನೊಂದಾಯಿಸಿಕೊಂಡಿರುವ ವಧು–ವರರ ವಿವರಗಳನ್ನು ಮಾರ್ಚಿ 10 ರಂದು ಪ್ರಕಟಿಸಲಾಗುವುದು. ವಧು-ವರರ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಮಾರ್ಚಿ 20 ರೊಳಗಾಗಿ ಸಲ್ಲಿಸಬಹುದು. ಅಂತಿಮ ವಧು-ವರರ ಪಟ್ಟಿಯನ್ನು ಏಪ್ರಿಲ್ 25ರಂದು ಪ್ರಕಟಿಸಲಾಗುವುದು. ಮಾಂಗಲ್ಯ ಭಾಗ್ಯ ಯೋಜನೆಯಲ್ಲಿ
ವರನಿಗೆ 5,000 ರೂ.ಗಳನ್ನು ಹಾಗೂ ವಧುವಿಗೆ 10,000 ರೂ.ಗಳನ್ನು ಮತ್ತು ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ( 48,000 ರೂ. ಮೌಲ್ಯದ್ದು) ಹೀಗೆ ಒಟ್ಟು 63,000 ರೂ.ಗಳನ್ನು ಅಭಿವೃದ್ಧಿ ಪ್ರಾಧಿಕಾರ ನಿಧಿಯಿಂದ ಭರಿಸಲಾಗುವುದು. ಇದಲ್ಲದೆ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮಕ್ಕೆ ಆಗಮಿಸುವ ವಧು-ವರರ ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಾಡಲಾಗುವುದು.
ಹೆಚ್ಚಿನ ವಿವರಗಳಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹಾಗು ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ನಾನು ನಿರ್ದೇಶಿತ ಸದಸ್ಯರುಗಳನ್ನು ಸಂಪರ್ಕಿಸಿ ಎಂದು ದೇವಾಲಯದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಬೈಲ್ ಸಂಖ್ಯೆ-ಜಿ.ಎನ್. ರಂಗಪ್ಪ- 9449142479, ರವಿ. ಕೆ.ಎಸ್- 9611290053, ಲಕ್ಷ್ಮವಾಯಕ 81050 12135, ಮಹೇಶ್‌ಕುಮಾರ್ ಆರ್.ವಿ-9886622223, ಹೇಮಲತಾ ರಮೇಶ ಎಂ ಎಲ್ 9900403330.