ಮಂಗನ ಕೈಗೆ ಮಾಣಿಕ್ಯ ಕಾಂಗ್ರೆಸ್ ಕೈಗೆ ಆಡಳಿತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಇತಿಹಾಸದಲ್ಲಿ ಇಂತಹ ಮತಿಗೆಟ್ಟ ಆಡಳಿತ ಎಂದೂ ನಡೆದಿಲ್ಲ. ಇವರು ಸರ್ಕಾರ ನಡೆಸುತ್ತಿದ್ದಾರೋ, ಮದ್ಯದ  ಅಂಗಡಿ ನಡೆಸುತ್ತಿದ್ದಾರೋ,‌ಎಲ್ಲವೂ ಗೊಂದಲಮಯ! ಆಗಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಟೀಕಿಸಿದೆ.

ಅರ್ಹರ ಬಿಪಿಎಲ್‌ಕಾರ್ಡ್ ರದ್ದೇ ಆಗಿಲ್ಲ ಎಂದು ವಾದಿಸುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇಂದು ರದ್ದಾಗಿರುವ ಕಾರ್ಡ್‌ಗಳನ್ನು ವಾಪಾಸ್ ನೀಡುವುದಾಗಿ ಘೋಷಿಸಿದೆ. ಹಾಗಾದರೆ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿದೆ ಎನ್ನುವ ರಾಜ್ಯ ಬಿಜೆಪಿ ಪಕ್ಷದ ಆರೋಪ ನಿಜ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ಪಕ್ಷ ತಿಳಿಸಿದೆ.

ಗ್ಯಾರಂಟಿಗಳಿಂದಾಗಿ ರಾಜ್ಯ ತೀವ್ರ ಆರ್ಥಿಕ‌ಸಂಕಷ್ಟ ಎದುರಿಸುತ್ತಿದೆ, ರಾಜ್ಯದ ಬೊಕ್ಕಸ ದಿನದಿಂದ ದಿನಕ್ಕೆ ಖಾಲಿಯಾಗುತ್ತಿದೆ.‌ಅವೈಜ್ಞಾನಿಕ ಗ್ಯಾರಂಟಿಗಳ ಜಾರಿಗಾಗಿ ಬಡವರ ಹೊಟ್ಟೆ ಮೇಲೆ ತುಘಲಕ್ ಸಿದ್ದರಾಮಯ್ಯ ಸರ್ಕಾರ ಪ್ರಹಾರ ನಡೆಸುವುದು ಎಷ್ಟು ಸರಿ? ಎಂದು ಬಿಜೆಪಿ ಪ್ರಶ್ನಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";