ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಡವರಿಗೆ ಸಾಕಷ್ಟು ಅನುಕೂಲ ಆಗುವ ಮತ್ತು ವೈದ್ಯಕೀಯ ಸೇವೆಗಳಲ್ಲಿ ವಿಶೇಷ ರಿಯಾಯಿತಿ ದೊರೆಯುವ ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು ಪ್ರತಿಯೊಬ್ಬರು ಹೊಂದುವುದು ಅಗತ್ಯವಾಗಿದೆ ಎಂದು ಮಾರುಕಟ್ಟೆ ವಿಭಾಗ ಮತ್ತು ಆರೋಗ್ಯ ಕಾರ್ಡ್ ವಿಭಾಗದ ಮಣಿಪಾಲ್ ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಣಿಪಾಲ್ ಆರೋಗ್ಯ ಕಾರ್ಡ ಪಡೆಯಲು ಯಾವುದೇ ಅರ್ಹತೆ ಬೇಕಿಲ್ಲ. ಸಾಮಾಜಿಕ ಬದ್ದತೆಯ ಸೇವಾ ಸಂಕೇತವಾಗಿ ಮಣಿಪಾಲ್ ಆರೋಗ್ಯ ಕಾರ್ಡ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಮತ್ತು ಆತನ ಕುಟುಂಬಕ್ಕೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಆರೋಗ್ಯ ದೊರಕಿಸುವುದು ಹಾಗೂ ಯೋಜನೆಯ ಅಡಿ ಸಿಗುವ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಒಬ್ಬ ವ್ಯಕ್ತಿ(ವ್ಯಯಕ್ತಿಕ) ಆರೋಗ್ಯ ಸೌಲಭ್ಯಕ್ಕಾಗಿ 350 ಹಾಗೂ ಕೌಟುಂಬಿಕ ಆರೋಗ್ಯ ಸೌಲಭ್ಯಗಳಗಾಗಿ 700 ರೂ.ಗಳನ್ನು ವಾರ್ಷಿಕ ಪಾವತಿಯೊಂದಿಗೆ ಮಣಿಪಾಲ್ ಆರೋಗ್ಯ ಕಾರ್ಡ್ ನ್ನು ಪ್ರತಿಯೊಬ್ಬರೂ ಪಡೆಯಬಹುದು. ಪತಿ, ಪತ್ನಿ, ೨೫ ವರ್ಷದೊಳಗಿನ ಮಕ್ಕಳು, ನಿಮ್ಮ ಹೆತ್ತವರು, ಪತ್ನಿಯ ತಂದೆ ತಾಯಿ ಅವರನ್ನು ಈ ಸೌಲಭ್ಯಗಳಡಿ ತರುವುದಾದರೆ 900 ರೂ.ಗಳನ್ನು ಪಾವತಿ ಮಾಡಿ ಕಾರ್ಡ್ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಇದಲ್ಲದೆ ಎರಡು ವರ್ಷಗಳಿಗೆ ಕಾರ್ಡ್ ಪಡೆಯುವ ಸೌಲಭ್ಯ ಕೂಡಾ ಇದ್ದು ಒಬ್ಬರಿಗೆ 600ರೂ., ಕುಟುಂಬಕ್ಕೆ 950 ಮತ್ತು ಕೌಟುಂಬಿಕ ಪ್ಲಸ್ ಯೋಜನೆಗೆ 1100 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಿ ಮಣಿಪಾಲ್ ಆರೋಗ್ಯ ಕಾರ್ಡ್ ವ್ಯಾಪ್ತಿಯಡಿ ತರಬಹುದು ಎಂದು ಮೋಹನ್ ಶೆಟ್ಟಿ ತಿಳಿಸಿದರು.
ಮಣಿಪಾಲ್ ಆರೋಗ್ಯ ಕಾರ್ಡ್ ಪಡೆದುಕೊಂಡಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಕೆ ಎಂ ಸಿ ಆಸ್ಪತ್ರೆ ಅತ್ತಾವರ ಮಂಗಳೂರುಗಳಲ್ಲಿ ಒಳರೋಗಿಗಳಿಗೆ ಆಸ್ಪತ್ರೆ ವೆಚ್ಚದ ಮೇಲೆ ಶೇ.೨೫ ರಷ್ಟು ರಿಯಾಯಿತಿ (ಕಸ್ಸೂಮೇಬಲ್ಸ್ ಹೊರತು ಪಡಿಸಿ) ಉಚಿತ ಸಮಾಲೋಚನಾ ಸೌಲಭ್ಯವು ಕೆ ಎಂ ಸಿ ಆಸ್ಪತ್ರೆ ಅತ್ತಾವರ, ಮಂಗಳೂರಿನಲ್ಲಿ ಮಾತ್ರ ಲಭ್ಯವಿದೆ ಎಂದರು.
ಡಾ|ಟಿ ಎಂ ಎ ಪೈ ಆಸ್ಪತ್ರೆ ಉಡುಪಿ ಮತ್ತು ಡಾ|ಟಿ ಎಂ ಪೈ ಆಸ್ಪತ್ರೆ ಕಾರ್ಕಳದಲ್ಲಿ ಶೇ.೧೫ ರ ರಿಯಾಯಿತಿಯನ್ನು ಎಲ್ಲಾ ವಾರ್ಡು (ಸ್ಪೆಷಲ್ ಮತ್ತು ಡಿಲಕ್ಸ್ ಸೇರಿ) ಗಳಲ್ಲಿ ಪಡೆಯಬಹುದು. ಆರೋಗ್ಯ ಕಾರ್ಡಿನ ಸದಸ್ಯತ್ವದ ದಿನಾಂಕದ ನಂತರ ಬರುವ ಅಪಘಾತ ಚಿಕಿತ್ಸೆಗಳಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಹೊರ ರೋಗಿಗಳಾಗಿ ಯಾವುದೇ ವೈದ್ಯಕೀಯ ಸಮಾಲೋಚನೆಗಳ ಮೇಲೆ ರಿಯಾಯಿತಿ ಶೇ.೫೦, ವೈದ್ಯರ / ಪರಿಣಿತರ ಶುಲ್ಕದಲ್ಲಿ ಶೇ.೫೦ ರಿಯಾಯಿತಿ, ಸಿಟಿ ಎಂ ಆರ್ ಐ ಮತ್ತು ಅಲ್ಟ್ರಾ ಸೌಂಡ್ (ವೈದ್ಯರ ವೆಚ್ಚವೂ ಸೇರಿದಂತೆ) ಒಟ್ಟು ಶುಲ್ಖದಲ್ಲಿ ಶೇ.೨೫ ರಿಯಾಯಿತಿ, ಪ್ರಯೋಗಾಲಯ ತಪಾಸಣೆ ಮತ್ತು ಇತರೆ ವಿಧಾನಗಳಲ್ಲಿ (ಎಕ್ಸರೇ ಇತ್ಯದಿ) ಶೇ.೨೫ ರಿಯಾಯಿತಿ, ಡಯಾಲಿಸಿಸ್ (ವೈದ್ಯರ ವೆಚ್ಚವೂ ಸೇರಿದಂತೆ) ೫೦ ರೂ. ರಿಯಾಯಿತಿ, ದಂತ ಚಿಕ್ಸಿತ್ಸೆಯಲ್ಲಿ ಶೇ.೨೦ ರಿಯಾಯಿತಿ, ಫಾರ್ಮಸಿ ವಿಭಾಗದಲ್ಲಿ ಖರೀದಿಸಿದ ಔಷಧಿಗೆ ಶೇ.೧೦ ರವರೆಗೆ ರಿಯಾಯಿತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ 1.75 ಲಕ್ಷ ಸದಸ್ಯರು ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಒಟ್ಟು 6.72 ಲಕ್ಷ ಸದಸ್ಯರು ಮಣಿಪಾಲ್ ಆರೋಗ್ಯ ಕಾರ್ಡ್ ಬಳಸುತ್ತಿದ್ದು ಕಳೆದ ವರ್ಷ 21.80 ಕೋಟಿ ರೂ.ಗಳ ರಿಯಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 2 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಯಾವುದೇ ವಯೋಮಾನದವರು ನೋಂದಣಿಗೆ ಅರ್ಹರಾಗಿದ್ದಾರೆ. ಅಕ್ಟೋಬರ್-31ರೊಳಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಜನತೆ ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ ಮಾಡಿಸಬೇಕಾದರೆ, ಮಾರುಕಟ್ಟೆ ಪ್ರತಿನಿಧಿಗಳಾದ ಕೆ.ಬಿ.ಕೆಂಚನಗೌಡ (೯೭೩೧೭೦೯೧೭೭), ಎಂ.ಪಂಚಾಕ್ಷರಪ್ಪ(6362273038), ತಿಪ್ಪೇಸ್ವಾಮಿ (೯೯೮೬೨೦೧೮೪೭), ಜಿ.ಜೆ.ಉಮೇಶ್(೯೪೮೧೨೯೧೪೯೯), ರಿವಿ. ಎಂ (8971714030) ಇವರನ್ನು ಸಂಪರ್ಕಿಸಬೇಕು. ಸೇವಾ ಕೇಂದ್ರ ಸೌಲಭ್ಯಕ್ಕಾಗಿ 9353720350, 8904219373 ಅವರನ್ನ ಸಂಪರ್ಕಿಸಬಹುದಾಗಿದೆ. ಅನಿಲ್ ನಾಯ್ಕ್, ಕೆಂಚನಗೌಡ, ದಿನೇಶ್ ಗೌಡಗೆರೆ ಅವರು ಸುದ್ದಿಗೋಷ್ಠಿಯಲ್ಲಿದ್ದರು.

