ನಗರಸಭೆ ಅಧ್ಯಕ್ಷ ಅಜ್ಜಪ್ಪಾಗೆ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡ ಉಪಾಧ್ಯಕ್ಷೆ ಮಂಜುಳಾ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆ ಅಧ್ಯಕ್ಷ ಅಜ್ಜಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕುರಿತು ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಹಿರಿಯೂರು ನಗರಸಭೆ ಉಪಾಧ್ಯಕ್ಷೆ ಮಂಜುಳಾ ಎಚ್ಚರಿಸಿ ಕೂಡಲೇ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

- Advertisement - 

ಡಿ.ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 5 ತಿಂಗಳ ಅವಧಿಗೆ ಅಧಿಕಾರ ಹಂಚಿಕೆಯಾಗಿತ್ತು, ಆದರೆ ತಾವು ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದರು ರಾಜೀನಾಮೆ ಕೊಡದೆ ಭಂಡತನ ಪ್ರದರ್ಶನ ಮಾಡುತ್ತಿರುವುದು ಎಷ್ಟು ಸರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಒಡಂಬಡಿಕೆಯಂತೆ ರಾಜೀನಾಮೆ ಕೇಳಿದ್ದಕ್ಕೆ ತಾಲೂಕಿನ ಹಗರಣ ಬಿಚ್ಚಿಡುತ್ತೇನೆ ಅಂತ ಬ್ಲಾಕ್‌ಮೇಲ್ ಮಾಡುತ್ತೀಯ. ಡಿ.ಸುಧಾಕರ್ ಅವರು ನಿನಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ನಗರಸಭೆ ಅಧ್ಯಕ್ಷನಾಗಿ ಮಾಡಿದ್ದಾರೆ. ಸುಧಾಕರ್ ಆರ್ಶಿರ್ವಾದ ಇಲ್ಲದಿದ್ದರೆ ನೀನು ನಗರಸಭೆಯ ಮೆಟ್ಟಿಲು ಹತ್ತುವುದಕ್ಕೂ ಆಗುತ್ತಿರಲಿಲ್ಲ. ಅದರೂ ನೀನು ಸಚಿವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸು ಇಲ್ಲದಿದ್ದರೆ ತಾಲ್ಲೂಕಿನ ಜನತೆ ನಿನಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಉಪಾಧ್ಯಕ್ಷೆ ಏಕ ವಚನದಲ್ಲೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

- Advertisement - 

ನಗರಸಭೆ ಅಧ್ಯಕ್ಷರಾಗಿ ಏಕಪಕ್ಷೀಯ ತೀರ್ಮಾನ ಮಾಡುವುದು, ಸದಸ್ಯರಿಗೆ ಬೆದರಿಕೆ ಹಾಕುವುದು ಹಾಗೂ ಸದಸ್ಯರಿಗೆ ಅಗೌರವವಾಗಿ ನಡೆದುಕೊಳ್ಳುವುದರ ವಿರುದ್ಧ ನಗರಸಭೆಯ 28 ಸದಸ್ಯರು ಅವಿಶ್ವಾಸಕ್ಕೆ ಸಹಿ ಹಾಕಿದ್ದೇವೆ. ನಿನಗೆ ನಗರಸಭೆ ಅಧ್ಯಕ್ಷನಾಗಿ ಮುಂದುವರೆಯುವ ಯೋಗ್ಯತೆ, ನೈತಿಕತೆ ಇಲ್ಲ. ನೀನು ಸದಸ್ಯರು ಮತ್ತು ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿದ್ದು ಈ ಕ್ಷಣದಿಂದಲೇ ರಾಜೀನಾಮೆ ಕೊಡಬೇಕೆಂದು ಹಿರಿಯೂರು ನಗರಸಭೆ ಉಪಾಧ್ಯಕ್ಷೆ ಮಂಜುಳಾ  ಅಗ್ರಹಿಸಿದ್ದಾರೆ.

 

- Advertisement - 

Share This Article
error: Content is protected !!
";