ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹಿರಿಯೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜವನಗೊಂಡನಹಳ್ಳಿ ಕೆ ಮಂಜುನಾಥ್ ರವನ್ನು ನೇಮಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಆದೇಶ ಪತ್ರದ ಮೂಲಕ ಘೋಷಿಸಿರುತ್ತಾರೆ.
ಕಳೆದ ಎರಡುವರೆ ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಕೆ ಮಂಜುನಾಥ್ ಮಾಜಿ ಮಂತ್ರಿಗಳಾದ ದಿವಂಗತ ಡಿ.ಮಂಜುನಾಥ್ ರವರ ಆಪ್ತರಾಗಿದ್ದರು.
ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜವನಗೊಂಡನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋಲುಕಂಡಿದ್ದರು. ಸರಳ ಸಜ್ಜನಿಕೆಯ ಸ್ವಭಾವದವರಾದ ಕೆ ಮಂಜುನಾಥ್ ಕಾಡುಗೊಲ್ಲ ಸಮಾಜದವರಾಗಿದ್ದು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿರುವ ಯಾದವ ಸಮಾಜದ ಮತಗಳನ್ನು ಸೆಳೆಯಲು ಅನುಕೂವಾಗಬಹುದು ಎನ್ನುವ ಚರ್ಚೆಗಳು ಆರಂಭವಾಗಿವೆ.
ಸುಮಾರು ವರ್ಷಗಳಿಂದಲು ಡಿ ಯಶೋಧರ್ ಅಧ್ಯಕ್ಷರಾಗಿದ್ದರು.
ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ ಜಯಣ್ಣ ಅಧ್ಯಕ್ಷರಾಗಿದ್ದರು. ಇವರನ್ನ ದಿಢೀರ್ ಬದಲಾಯಿಸಲಾಗಿದೆ. ಜಿಲ್ಲಾ ಜತ್ಯಾತೀತ ಜನಾತದಳಕ್ಕೆ ಹಿರಿಯೂರಿನವರೆ ಪ್ರತಿ ಸಲವು ಅಧ್ಯಕ್ಷರಾಗುತ್ತಿರುವುದು ವಿಶೇಷವಾಗಿದೆ.

