ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದಾವಣಗೆರೆ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯುವ ವಾಲ್ಮೀಕಿ ಜಾತ್ರೆ ಪ್ರಯುಕ್ತವಾಗಿ ಚಿತ್ರದುರ್ಗ ತಾಲೂಕಿನ ಜಾತ್ರೆ ಸಮಿತಿ ಅಧ್ಯಕ್ಷರನ್ನಾಗಿ ಚಿತ್ರದುರ್ಗ ಉದ್ಯಮಿ ಮಂಜುನಾಥ್ ಅವರನ್ನು ಸ್ವಾಮೀಜಿ ನೇಮಕ ಮಾಡಿದ್ದಾರೆ.
ಉದ್ಯಮಿ ಮಂಜುನಾಥ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷ ಸಹ ನಾಯಕ ಸಮಾಜದ ಹಳ್ಳಿಗಳಿಗೆ ತೆರಳಿ ವಾಲ್ಮೀಕಿ ಜಾತ್ರೆ ಸಂಘಟನೆ ಕುರಿತು ಚರ್ಚೆ ನಡೆಸಲಾಗುವುದು. ನಮ್ಮ ಸಮಾಜದ ಎಲ್ಲಾ ಮುಖಂಡರ ಜೊತೆ ಸೇರಿ ಜಾತ್ರೆ ಪ್ರೋತ್ಸಾಹ ನೀಡಲು ಮನವಿ ಮಾಡುತ್ತೇನೆ. ಸ್ವಾಮೀಜಿ ಸಲಹೆಯಂತೆ ಸಮಾಜದವನ್ನು ಜಾತ್ರೆಗೆ ಸಂಘಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.