ಕೇಂದ್ರ ವಿತ್ತ ಸಚಿವೆ ಮಂಡಿಸಿದ ಆಯವ್ಯಯದಲ್ಲಿ ಕರ್ನಾಟಕಕ್ಕೆ ಅನ್ಯಾಯ-ಮಂಜುನಾಥ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ ಆಯವ್ಯಯ ಮುಂಗಡ ಪತ್ರದಲ್ಲಿ ನಮ್ಮ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ. ಎಂದು ಅರ್ಥ ಶಾಸ್ತ್ರ ಪ್ರಾಧ್ಯಾಪಕ ಹಾಗೂ ಲಾವಣ್ಯ ಪದವಿ ಕಾಲೇಜಿನ ಪ್ರಾಮ್ಶುಪಾಲ ಎಂ. ಸಿ. ಮಂಜುನಾಥ್ ಕೇಂದ್ರ ಬಡ್ಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

      ಮಾಧ್ಯಮ ಪ್ರತಿನಿದಿಗಳೊಂದಿಗೆ ಅವರು ಮಾತನಾಡಿ ಕಳೆದ ಬಾರಿಯ ಬಡ್ಜೆಟ್ ನಲ್ಲಿ ಮಂಡಿಸಲಾದ ಹಣಕಾಸು ಆಯೋಗದ ಪೂರ್ಣವಾಗಿ ಜಾರಿಯಾಗಿಲ್ಲ. ಜೊತೆಗೆ ಈ ಬಾರಿಯ ಹಣಕಾಸು ಆಯೋಗದ ಶಿಫಾರಸ್ಸುಗಳು ಜಾರಿಗೆ ತರುವಲ್ಲಿ ಎಡವಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

- Advertisement - 

ರಾಜ್ಯದ ತೆರಿಗೆ ಪಾಲು ಶೇ. 4.71 ರಷ್ಟು ನೀಡಬೇಕಿತ್ತು. ಆದರೆ ಕೇವಲ 4.13 ರಷ್ಟನ್ನು ನೀಡಿರುವುದು ಕನ್ನಡಿಗರಿಗೆ ಭ್ರಮ ನಿರಸ ವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಕಡಿಮೆ ಹಂಚಿಕೆ ಮಾಡಿ ತಾರತಮ್ಯ ತೋರಲಾಗಿದೆ. ಜೊತೆಗೆ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ.

ಆದರೆ ರೂಪಾಯಿ ಮೌಲ್ಯ ಹೆಚ್ಚಳದ ಬಗ್ಗೆ ಹಣಕಾಸು ಸಚಿವರು ಯಾವುದೇ ಪರಿಹಾರ ಸೂಚಿಸಿಲ್ಲ. ಇದರಿಂದ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಆತಂಕವಿದೆ ಎಂದು ಮಂಜುನಾಥ್ ಹೇಳಿದರು.

- Advertisement - 

 

 

 

Share This Article
error: Content is protected !!
";