ಮ್ಯಾನುವಲ್ ಸ್ಕ್ಯಾವೆಂಜರ್ ಸಮೀಕ್ಷೆ ಕಾರ್ಯ ನಡೆಸಿ- ಜಿಲ್ಲಾಧಿಕಾರಿ ಟಿ.ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎನ್.ಜಿ. (ಸರ್ಕಾರೇತರ ಸಂಸ್ಥೆ) ಗಳ ಸಹಕಾರದೊಂದಿಗೆ ಅಧಿಕಾರಿಗಳು ಜಿಲ್ಲೆಯಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ ಸಮೀಕ್ಷೆ ಕಾರ್ಯ ನಡೆಸಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುರಿತು ಜರುಗಿದ ಸಭೆಯ ಅಧ್ಯಕ್ಷೆತೆ ವಹಿಸಿ ಅವರು ಮಾತಡಿದರು.

ಹಿಂದೆ ಜಿಲ್ಲೆಯಲ್ಲಿ ಯಾವುದೇ ಮ್ಯಾನುವಲ್ ಸ್ಕ್ಯಾವೆಂಜರ್ ಕಾರ್ಯ ಮಾಡುವವರು ಇಲ್ಲ ಎಂದು ಮಾಹಿತಿ ನೀಡಲಾಗಿದೆ. ಆದರೆ ಸ್ವರ್ವೋಚ್ಛ ನ್ಯಾಯಾಲಯ ದೇಶಾದ್ಯಂತ ಮತ್ತೊಮ್ಮೆ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಕಾರ್ಯ ಮಾಡುವವರ ಕುರಿತು ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದೆ.

ಹಿನ್ನಲೆಯಲ್ಲಿ ಸರ್ವೇ ಕಾರ್ಯ ಕೈಗೊಂಡು ನಮಸ್ತೆ  (NAMASTE) ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕಿದೆ. ಅನೈರ್ಮಲ್ಯ ಕೆಲಸ ನಿರ್ವಹಿಸುತ್ತಿದ್ದ ಕುರಿತು ಸಲ್ಲಿಕೆಯಾದ ಸ್ವಯಂ ಘೋಷಿತ  ಅರ್ಜಿಗಳನ್ನು ಪರಿಶೀಲನೆ ಮಾಡುವಾಗ ನಿಯಮಾನುಸಾರ ಸ್ಥಳಕ್ಕೆ ಭೇಟಿ ನೀಡಬೇಕು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಚಾರ ನೀಡುವ ಮೂಲಕ ಸರ್ವೇ ಕಾರ್ಯ ನಡೆಸಬೇಕು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಸರ್ವೇ ಕಾರ್ಯದ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ, ಅಕ್ಟೋಬರ್ 03 ರಿಂದ 10 ನೇ ತಾರೀಕಿನವರೆಗೆ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ಕುರಿತು ವ್ಯಾಪಕ ಪ್ರಚಾರ ನಡೆಸಲಾಗುವುದು.  

ಇದಕ್ಕಾಗಿ ಆಂದೋಲನ ಹಮ್ಮಿಕೊಳ್ಳಲಾಗುವುದು. ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಕೆ ಮಾಡಲಾಗುವುದು. ಕಸ ಸಂಗ್ರಹ ವಾಹನಗಳಲ್ಲಿ ಆಡಿಯೋ ಜಿಂಗಲ್ಗಳನ್ನು ಪ್ರಸಾರ ಮಾಡಲಾಗುವದು. ಅಕ್ಟೋಬರ್ 14 ರಂದು ಆಂದೋಲನಗಳಲ್ಲಿ ಸ್ವಯಂ ಘೋಷಿತ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅಕ್ಟೋಬರ್ 15 ರಿಂದ 19 ವರೆಗೆ ಸ್ವಯಂ ಘೋಷಿತ ಅರ್ಜಿಗಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು.  

ಅಕ್ಟೋಬರ್ 21 ರಿಂದ 23 ವರೆಗೆ ಅರ್ಜಿಗಳ ಕುರಿತು ಸ್ಥಳ ಪರಿಶೀಲನೆ, ಪೋರ್ಟ್ಲ್ ನಲ್ಲಿ ಮಾಹಿತಿ ಅಳವಡಿಕೆ ಹಾಗೂ ಸರ್ವೇ ಕಾರ್ಯ ನಡೆಸಲಾಗುವುದು. ನಂತರ ಕ್ರೂಢೀಕೃತ ತಾತ್ಕಾಲಿಕ ಪಟ್ಟಿ ಸಿದ್ದಪಡಿಸಿ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 23 ರಿಂದ ನವೆಂಬರ್ 7 ವರೆಗೆ 15 ದಿನಗಳ ಕಾಲಾವಕಾಶ ನೀಡಲಾಗುವುದು.

ನಂತರ ನವೆಂಬರ್ 8 ರಿಂದ 9 ತಾರೀಕಿನಂದು ಆಕ್ಷೇಪಣೆಗಳನ್ನು ಪರಿಶೀಲಿಸಿ ಮ್ಯಾನುವಲ್ ಸ್ಕ್ಯಾವೆಂಜಿಗ್ ಕಾರ್ಯ ಮಾಡುವವರ ಅಂತಿಮ ಪಟ್ಟಿ ಸಿದ್ದಪಡಿಸಲಾಗುವುದು. ನವೆಂಬರ್ 11 ರಿಂದ 16 ಒಳಗೆ ಜಿಲ್ಲಾ ಮಟ್ಟದ ಸಮೀಕ್ಷಾ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು.

ನಂತರ ಅನುಮೋದನೆ ಪಡೆದ ಪಟ್ಟಿಯನ್ನು ಪ್ರಕಟಿಸಿ ನಮಸ್ತೆ ಸರ್ವೇ ಪೋರ್ಟ್ಲ್ .ಎಸ್. ಸರ್ವೇ ಆಪ್ನಲ್ಲಿ ಅಪ್ಲೋಡ್ ಮಾಡುವುದಾಗಿ ತಿಳಿಸಿದರು.

ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಮ್ಯಾನುವಲ್ ಸ್ಕ್ಯಾವೆಂಜರ್ ಹಾಗೂ ಸಫಾಯಿ ಕರ್ಮಚಾರಿ ಸೇವಾ ಸಮಿತಿಯ ಕೆ.ರಾಜಣ್ಣ, ನಳೀನ.ಆರ್, ಶ್ರೀನಿವಾಸ, ರಜಿನಿಕಾಂತ್ ಸೇರಿದಂತೆ ನಗರಸಭೆ, ತಾಲ್ಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";