ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2025ರ ಸೆಪ್ಟೆಂಬರ್-03 ರಂದು ಹಲವು ರೈಲುಗಳ ತಾತ್ಕಾಲಿಕ ರದ್ದು / ಭಾಗಶಃ ರದ್ದು / ನಿಯಂತ್ರಣ ಆಗಲಿವೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಬ್ಯಾಡಗಿ ಮತ್ತು ತೋರಣಗಲ್ಲು ಯಾರ್ಡುಗಳಲ್ಲಿ ತಿಕ್ ವೆಬ್ ಸ್ವಿಚ್ ಗಳ ಬದಲಾವಣೆ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ ಸೆ-3 ರಂದು ರೈಲುಗಳು ಸಂಪೂರ್ಣ ರದ್ದು / ಭಾಗಶಃ ರದ್ದು / ನಿಯಂತ್ರಿಸಲ್ಪಡುತ್ತವೆ ಎಂದು ತಿಳಿಸಿದ್ದಾರೆ.
ಸೆ-03ರಂದು ಸಂಪೂರ್ಣ ರದ್ದುಗೊಂಡ ರೈಲುಗಳು-
1. ರೈಲು ಸಂಖ್ಯೆ. 57415 ಗುಂಟಕಲ್ – ಚಿಕ್ಕಜಾಜೂರು ದೈನಂದಿನ ಪ್ಯಾಸೆಂಜರ್ ಸಂಪೂರ್ಣ ರದ್ದು. 2. ರೈಲು ಸಂಖ್ಯೆ. 57416 ಚಿಕ್ಕಜಾಜೂರು – ಗುಂಟಕಲ್ ದೈನಂದಿನ ಪ್ಯಾಸೆಂಜರ್ ಸಂಪೂರ್ಣ ರದ್ದು. 3. ರೈಲು ಸಂಖ್ಯೆ. 07397 ಹೊಸಪೇಟೆ – ಬಳ್ಳಾರಿ ಡೆಮು ಸಂಪೂರ್ಣ ರದ್ದು.
ಭಾಗಶಃ ರದ್ದುಗೊಂಡ ರೈಲುಗಳು-
1.ರೈಲು ಸಂಖ್ಯೆ. 07395 ಬಳ್ಳಾರಿ – ದಾವಣಗೆರೆ ಡೆಮು ಬಳ್ಳಾರಿ – ಹೊಸಪೇಟೆ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಹೊಸಪೇಟೆಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡುತ್ತದೆ.
2. ರೈಲು ಸಂಖ್ಯೆ. 57406 ಕದಿರಿದೇವರಪಳ್ಳಿ – ತಿರುಪತಿ ಪ್ಯಾಸೆಂಜರ್ ಕದಿರಿದೇವರಪಳ್ಳಿ – ಗುಂಟಕಲ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಗುಂಟಕಲ್ ನಿಂದ ನಿಗದಿತ ಸಮಯದಲ್ಲಿ ಹೊರಡುತ್ತದೆ.
- ರೈಲು ಸಂಖ್ಯೆ. 56911 ಎಸ್ಎಸ್ಎಸ್ ಹಬ್ಬಳ್ಳಿ – ಗುಂಟಕಲ್ ಪ್ಯಾಸೆಂಜರ್ ಮುನಿರಾಬಾದ್ – ಗುಂಟಕಲ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಮುನಿರಾಬಾದ್‍ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
4. ರೈಲು ಸಂಖ್ಯೆ. 56912 ಗುಂಟಕಲ್ – ಎಸ್ಎಸ್ಎಸ್ ಹಬ್ಬಳ್ಳಿ ಪ್ಯಾಸೆಂಜರ್ ಗುಂಟಕಲ್ – ಮುನಿರಾಬಾದ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಮುನಿರಾಬಾದ್‌ನಿಂದ ತನ್ನ ನಿಗದಿತ ಸಮಯದಲ್ಲಿ ಹೊರಡುತ್ತದೆ.
5. 02.09.2025ರಂದು ರೈಲು ಸಂಖ್ಯೆ. 57405 ತಿರುಪತಿ – ಕದಿರಿದೇವರಪಳ್ಳಿ ಪ್ಯಾಸೆಂಜರ್ ಗುಂಟಕಲ್ – ಕದಿರಿದೇವರಪಳ್ಳಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಗುಂಟಕಲ್‍ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ರೈಲು ನಿಯಂತ್ರಣೆ-
ಸೆ-03 ರಂದು ರೈಲು ಸಂ. 57402 ಎಸ್ಎಸ್ಎಸ್ ಹುಬ್ಬಳ್ಳಿ – ತಿರುಪತಿ ಪ್ಯಾಸೆಂಜರ್ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

