ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ಅಕ್ರಮವಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಜನರ ಒಳಿತಿಗಾಗಿ ಪರ್ಯಾಯ ರಾಜಕೀಯ ಶಕ್ತಿ ಕಟ್ಟಬೇಕಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ (ಎಐಬಿಎಸ್‌ಪಿ) ರಾಜ್ಯ ಘಟಕ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಹಾಗೂ ನೂತನ ಪದಾಧಿ ಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಣ, ಹೆಂಡ, ಸೀರೆ ನೀಡಿ ಮತದಾರರನ್ನೂ ರಾಜಕೀಯ ಪಕ್ಷಗಳು ಹಾಳುಮಾಡಿವೆ. ಮತ ಮಾರಾಟ ಮಾಡಿಕೊಳ್ಳದೆ, ತಮ್ಮ ಏಳಿಗೆಗಾಗಿ ಕೆಲಸ ಮಾಡುವವರಿಗೆ ಮತ ನೀಡುವಂತೆ ಬೂತ್ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
2028ಕ್ಕೆ ರಾಜ್ಯದಲ್ಲಿ ಆಲ್ ಇಂಡಿಯಾ ಬಿಎಸ್ಪಿ ಪಕ್ಷ ರಾಜಕೀಯ ಶಕ್ತಿಯಾಗಿ ಬೆಳೆಯಲಿದೆ ಎಂದು ಹೇಳಿದ ಅವರು, ಪರಿಶಿಷ್ಟ ಜಾತಿಗಳಿಗೆ ಜಿಲ್ಲಾಧ್ಯಕ್ಷರಾಗಿ ಮಹಾದೇವು, ಜಿಲ್ಲಾ ಉಪಾಧ್ಯಕ್ಷರಾಗಿ ಆಂಜಿನಪ್ಪ, ದೊಡ್ಡಯ್ಯ. ಹಿಂದುಳಿದ ವರ್ಗ ವಿಭಾಗ ಜಿಲ್ಲಾಧ್ಯಕ್ಷರಾಗಿ ಸೋಮಶೇಖರ್ ಅರಳುಮಲ್ಲಿಗೆ, ಜಿಲ್ಲಾ ಕಾರ್ಯದರ್ಶಿಯಾಗಿ ರಾಜಕುಮಾರ್. ತಾಲೂಕು ಘಟಕ ಅಧ್ಯಕ್ಷರಾಗಿ ನಂಜೇಶ್,
ಉಪಾಧ್ಯಕ್ಷರಾಗಿ ಶಿವು, ದುರ್ಗೇನಹಳ್ಳಿ ಮಂಜುನಾಥ, ಆನಂದ್, ಪ್ರಧಾನಕಾರ್ಯದರ್ಶಿಯಾಗಿ ದಾಳಪ್ಪ, ಖಜಾಂಚಿಯಾಗಿ ವೆಂಕಟೇಶ್, ಕಾರ್ಯದರ್ಶಿ ಯಾಗಿ ಅಶೋಕ್, ರಂಗಸ್ವಾಮಿ, ನರಸಿಂಹಯ್ಯ, ಯುವ ಘಟಕದ ಅಧ್ಯಕ್ಷರಾಗಿ ಗುರುಪ್ರಸಾದ್, ನಗರ ಅಧ್ಯಕ್ಷರಾಗಿ ರವಿ, ಉಪಾಧ್ಯಕ್ಷರಾಗಿ ಶ್ರೀನಿವಾಸ,
ಗಣೇಶ್ ಆಯ್ಕೆಯಾಗಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ಪಿ ವೆಂಕಟೇಶ್, ಉಪಾಧ್ಯಕ್ಷರಾದ ಲೋಕೇಶ್, ಚಂದ್ರ, ಜಿಲ್ಲಾಧ್ಯಕ್ಷ ಮಹಾದೇವು, ಜಿಲ್ಲಾ ಸಂಯೋಜಕ ಬಿ.ಎಲ್. ರಾಜಪ್ಪ, ಉಪಾಧ್ಯಕ್ಷ ನಾಗರಾಜ್, ತಾಲೂಕು ಅಧ್ಯಕ್ಷ ನಂಜೇಶ್ ಮತ್ತಿತರರು ಹಾಜರಿದ್ದರು.