ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆದರು ಶೈಕ್ಷಣಿಕ ಆರ್ಥಿಕ ಸಾಮಾಜಿಕವಾಗಿ ಪರಿಶಿಷ್ಠ ಜಾತಿ ಹಾಗು ಪಂಗಡ ಹಿಂದೂಳಿದ.ವರ್ಗ
ಅಲ್ಪಸಂಖ್ಯಾತರಿಗೆ ಸಮಾನತೆ ಬದುಕು ಕಟ್ಟಿಕೊಳ್ಳಲು ಸಾದ್ಯವಾಗದೆ ಬಡತನ ರೇಖೆಗಿಂತ ಕೆಳಗೆ ಉಳಿದಿದ್ದಾರೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಈಗಿನ ಸರ್ಕಾರಗಳ ವಿರುದ್ದ ಆರೋಪಿಸಿದರು.
ನಗರ ರಾಮೇಗೌಡ ರಸ್ತೆಯಲ್ಲಿರುವ ಡಾ ಬಿ ಅರ್ ಅಂಬೇಡ್ಕರ ಭವನದಲ್ಲಿ ಆಯೋಜನೆ ಮಾಡಲಾಗದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆಯ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಬಡತನ, ಅಸಮಾನತೆ, ಅನಕ್ಷರತೆ, ನಿರುದ್ಯೋಗ ತಾಂಡವಾಡುತ್ತಿದ್ದರು. ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಓಟಿಗಾಗಿ ಜನಸಾಮಾನ್ಯರನ್ನು ಬೆರಗು ಮಾಡಿ ಮತ ಪಡೆದ ನಂತರ ಅವರ ಕಷ್ಟಗಳೆನು ಎಂಬುದು ತಿಳಿಯದೆ ನಮ್ಮನ್ನು ತಮ್ಮ ಗುಲಾಮರಾಗಿ ಮಾಡಿಕೊಂಡಿದ್ದಾರೆ. ಭಾರತದೇಶದ ಸ್ವಾತಂತ್ರ್ಯಕ್ಕಾಗಿ ದಲಿತರು ಹಿಂದುಳಿದ ವರ್ಗದವರನ್ನು ಯುದ್ದ ಸಮಯದಲ್ಲಿ ಬಳಿಸಿ ಕೊಂಡು ನಂತರ ಅವರಿಗೆ ಭೂಮಿ. ವಿದ್ಯೆ. ಸರ್ಕಾರಿ ಉದ್ಯೋಗ. ಮೂಲಭೂತ ಸೌಕರ್ಯ ನೀಡದ ಜೀತದ ಹಾಳುಗಳಾಗಿ ಮಾಡಿಕೊಂಡಿರುವ ಮೇಲ್ವರ್ಗದವರ ವಿರುದ್ದ ಹೋರಾಟ ಮಾಡಿದ
ಬಾಬಾ. ಸಾಹೇಬರು ಬಿ ಆರ್.ಅಂಬೇಡ್ಕರ್ ಸಂವಿಧಾನದ ಮುಖಾಂತರ. ಎಲ್ಲರಿಗೂ ಸಮಾನತೆ ಬದುಕು ಕಲ್ಪಿಸಲು ಕೊಟ್ಟಿದ್ದಾರೆ ಹಾಗು
ತಮ್ಮ ಜೀವನವನ್ನು ದೀನ ದಲಿತರ ಹಾಗು ಶೋಷಣೆಗೆ ಒಳಗಾದವರ ಪರವಾಗಿ ಹೋರಾಟ ಮಾಡಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ನೀಡುವಲ್ಲಿ ಸಂವಿಧಾನದಲ್ಲಿ ಎಲ್ಲಾ ಜಾತಿ ಜನಾಂಗಕ್ಕೆ ಅನ್ವಯಿಸುವಂತೆ ಮಾಡಿದರಕ ಆದರೆ 79 ವರ್ಷಗಳ ಸುದೀರ್ಘ ಕಾಲ ಜನರಿಂದ ಆಯ್ಕೆಯಾದ ಸರ್ಕಾರಗಳು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮೇಲ್ನೋಟಕ್ಕೆ ಈ ಬಹುಜನರ ಪರವಿದ್ದಂತೆ ನಾಟಕವಾಡುತ್ತಾ ಒಳಗೊಳಗೆ ಮನುವಾದವನ್ನು ಬೆಳೆಸುತ್ತದೆ. ಬಿಜೆಪಿ ಜನರ ಸಮಸ್ಯೆಗಳನ್ನು ಪರಿಹರಿಸದೆ ಹಿಂದೂ-ಮುಸ್ಲಿಂ ಹಗೆತನ ತೋರುತ್ತಾ ಧರ್ಮ-ಧರ್ಮಗಳನ್ನು ಒಡೆದು ಜಾತಿ-ಜಾತಿಗಳ ಮದ್ಯೆ ವಿಷ ಬೀಜವನ್ನು ಬಿತ್ತಿ ತಮ್ಮ ಗುಲಾಮರಾಗಿ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದಾರೆ ಆದರಿಂದ ನಾವು ಎಚ್ಚರವಾಗ ಬೇಕಾಗಿದೆ ಎಂದರು.
ನಂತರ ಆಲ್ ಇಂಡಿಯ ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಸಂಯೋಜಕ ಎಂ ಗೋಪಿನಾಥ ಮಾತನಾಡಿ ಸಂವಿಧಾನದ ಮೂಲ ತತ್ವವೇನೆಂದರೆ, ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸಂಪತ್ತು ದೊರೆಯಬೇಕು.
ಈ ಎರಡೂ ಮೇಲ್ವಾತಿ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿ ಜೆ ಪಿ ಇವುಗಳು ಜಾತಿಪದ್ಧತಿ, ಬಡತನ, ಅಸಮಾನತೆ, ನಿರುದ್ಯೋಗ, ದೌರ್ಜನ್ಯಗಳನ್ನು ಶಾಶ್ವತವಾಗಿ ಇರಿಸಲು ಪ್ರಯತ್ನಿಸುತ್ತವೆ. ಈ 15% ಮೇಲ್ಟಾತಿ ಜನರಿಂದ ಮೂಲನಿವಾಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರ ವಿಮೋಚನೆಗೆ ಸಾಧ್ಯವಿಲ್ಲವೆಂದು ಕಳೆದ 79 ವರ್ಷಗಳ ನಮ್ಮ ಅನುಭವ ತೋರುತ್ತದೆ.
ಅದರೆ ಈಗ ನಾವೇನು ಮಾಡುತ್ತಿದ್ದೇವೆ ಕಾಂಗ್ರೆಸ್ ಬಿಟ್ಟರೆ ಬಿಜೆಪಿ, ಬಿಜೆಪಿ ಬಿಟ್ಟರೆ ಕಾಂಗ್ರೇಸ್‌ಗೆ ಓಟು ಹಾಕುವುದನ್ನು ನಿಲ್ಲಿಸಬೇಕು. ಇಂದು ಪರ್ಯಾಯವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರ ವಿಮೋಚನೆಗಾಗಿ ರಾಜ್ಯದಲ್ಲಿ ಉದಯಿಸಿರುವ “ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ”ಯನ್ನು ಕಟ್ಟಿ ಬೆಳಸಬೇಕು. ಹಳ್ಳಿ ಹಳ್ಳಿ, ಮನೆ ಮನೆಗೆ ಬಾಬಾಸಾಹೇಬರ, ಕಾನ್ಸಿ ರಾಮ್ ಜೀ, ಮಹಾತ್ಮ ಜ್ಯೋತಿಬಾ ಪುಲೆ, ಛತ್ರಪತಿ ಶಾಹು ಮಹಾರಾಜ್, ನಾರಾಯಣಗುರು, ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪ್ರೊ. ಬಿ.ಕೃಷ್ಣಪ್ಪ ಅವರ ಸಂದೇಶವನ್ನು ಮುಟ್ಟಿಸಿ ಓಟಿನ ಮಹತ್ವ ತಿಳಿಸಬೇಕು ಆಲ್ ಇಂಡಿಯಾ ಬಿಎಸ್‌ಪಿಯನ್ನು ಗೆಲ್ಲಿಸು ವಂತೆ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರದಾನ ಕಾರ್ಯದರ್ಶಿ ನಂದಿಗುಂದ ಪಿ ವೆಂಕಟೇಶ. ಜಿಲ್ಲಾಧ್ಯಕ್ಷ ಮಹದೇವ್. ರಾಜ್ಯ ಸಂಯೋಜಕ ಆರ್. ಮುನಿಯಪ್ಪ. ರಾಜ್ಯ ಕಾರ್ಯದರ್ಶಿ ರಮಾದೇವಿ
ತಾಲ್ಲೂಕು ಅಧ್ಯಕ್ಷ ನಂಜೇಶ್ ಉಪಾಧ್ಯಕ್ಷ ಮುನೀಂದ್ರ ಕುಮಾರ್ತಾಲ್ಲುಕು ಪ್ರದಾನ ಕಾರ್ಯದರ್ಶಿ ಎನ್ ಎಂ. ದಾಳಪ್ಪ ಹಾಗು ಜಿಲ್ಲಾ ನಗರ ಗ್ರಾಮಾಂತರದ ಪದಾಧಿಕಾರಿಗಳು ಭಾಗವಹಿಸಿದ್ದರು.

