ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಲ್ಮೀಕಿ ನಗರದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾರ್ಚ್ 1ರ ಭಾನುವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ ಶ್ರೀರಾಮಕೃಷ್ಣ ಪರಮಹಂಸರ 191ನೇ ಜಯಂತ್ಯುತ್ಸವದ ಪ್ರಯುಕ್ತ ವಿಶೇಷ ಭಜನೆ ಮತ್ತು ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಾರ್ಚ್-1ರಂದು ಬೆಳಗ್ಗೆ 10.30ರಿಂದ ಬೆಂಗಳೂರಿನ ಶ್ರೀಶಾರದಾದೇವಿ ಪ್ರಗತಿ ಮಂದಿರದ ವಿದ್ಯಾರ್ಥಿನಿ ಕುಮಾರಿ ಚಿನ್ಮಯಿ ರಾವ್ ಮತ್ತು ಸಂಗಡಿಗರಿಂದ “ಶ್ರೀರಾಮಕೃಷ್ಣ ಗಾನಸುಧೆ”, 11.30ರಿಂದ ಹಿರಿಯೂರಿನ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ಚೈತನ್ಯಮಯೀ ಅವರಿಂದ “ಅವತಾರ ವರಿಷ್ಠ ಶ್ರೀರಾಮಕೃಷ್ಣ” ಎಂಬ ವಿಷಯವಾಗಿ ಪ್ರವಚನ,12.15ರಿಂದ “ಸ್ವಾಮಿ ವಿವೇಕಾನಂದರ ಗುರು” ಎಂಬ ವಿಷಯವಾಗಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ತ್ಯಾಗಮಯೀ ಅವರು ಪ್ರವಚನ ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಅನ್ನಪ್ರಸಾದ ವಿನಿಯೋಗ ನಡೆಯಲಿದ್ದು ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಎಚ್ ಲಕ್ಷ್ಮೀದೇವಮ್ಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

