ಮಾರ್ಚ್ 24 ರಂದು ರಾಜ್ಯ ಸರ್ಕಾರದ ಒಳಮೀಸಲಾತಿ ವಿಂಗಡಣೆ ವಿರುದ್ಧ ಪ್ರತಿಭಟನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಭೋವಿ
, ಕೊರಚ, ಕೊರಮ ಹಾಗೂ ಲಂಬಾಣಿ ಸಮುದಾಯಗಳಿಗೆ ಒಳಮೀಸಲಾತಿ ಜಾರಿಗೊಳಿಸುವಲ್ಲಿ  ಸೂಕ್ತ ನ್ಯಾಯ ದೊರೆತಿಲ್ಲ ಹಾಗಾಗಿ ಮಾರ್ಚ್ 24ರಂದು ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಸಮುದಾಯದ ಬಂಧುಗಳು ಭಾಗವಹಿಸಿ ನಮ್ಮ ಹಕ್ಕು ಪಡೆಯಲು ಸಹಕರಿಸಬೇಕೆಂದು ತಾಲ್ಲೂಕು ಭೋವಿ ಜನಾಂಗ ಸಂಘದ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

ಸಂಘದ ತಾಲ್ಲೂಕು ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಸಮುದಾಯಗಳಿಗೆ ಒಳ ಮೀಸಲಾತಿ  ನೀಡುವ ವಿಚಾರದಲ್ಲಿ ಮೋಸವಾಗಿದೆ. ಈ ಹಿಂದೆ ಇದ್ದ ಮೀಸಲಾತಿ ವಿಧಾನವನ್ನೇ ಯಥಾವತ್ ಮುಂದುವರಿಸಬೇಕೆಂದು  ಇಲ್ಲವೇ ನಮ್ಮ ಸಮುದಾಯಗಳಿಗೆ  ಹೆಚ್ಚಿನ ಮೀಸಲಾತಿ ಒದಗಿಸಬೇಕೆಂದು  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟಕ್ಕೆ ಮುಂದಾಗಿದ್ದೇವೆ . ಕಡುಬಡಕುಟುಂಬಗಳಿಂದ ಕೂಡಿರುವ ನಮ್ಮ ಸಮುದಾಯಗಳಿಗೆ ಮೀಸಲಾತಿ ನೀಡುವಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಬೇಕು  ಎಂದರು.

- Advertisement - 

 ಮಾರ್ಚ್ 24ರಂದು ನಡೆಯುವ ಪ್ರತಿಭಟನೆಗೆ ತಾಲೂಕಿನಿಂದ  ಬಸ್ ಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ  ಸಮುದಾಯದ ಬಂಧುಗಳು ಹೊರಡಲು ತೀರ್ಮಾನಿಸಿದ್ದು. ಹೆಚ್ಚಿನ ಸಂಖ್ಯೆಯಲ್ಲಿ  ಎಲ್ಲ ಸಮುದಾಯದ ಬಂಧುಗಳು ಭಾಗವಹಿಸಿ  ಈ ಪ್ರತಿಭಟನೆ ಯಶಸ್ವಿಗೊಳಿಸಬೇಕಿದೆ ಎಂದರು.

 ಸಮುದಾಯದ ಮುಖಂಡರು ಮಾತನಾಡಿ ನಮ್ಮ ಭೋವಿ ಸಮಾಜದಲ್ಲಿ ಇಂದಿಗೂ ಕಲ್ಲು ಬಂಡೆ ಹೊಡೆದು ಜೀವನ ಸಾಗಿಸುವ ಸಾವಿರಾರು ಕುಟುಂಬಗಳಿವೆ. ಮೀಸಲಾತಿ ದೊರೆತರೆ ಬಡ ಸಮುದಾಯಗಳು ಸಮಾಜದಲ್ಲಿ ಮುಂದುವರೆಯಲು ಸಾಧ್ಯ ರಾಜ್ಯ ಸರ್ಕಾರ  ನಮ್ಮ ಸಮುದಾಯಕ್ಕೆ ಸೂಕ್ತ ಮೀಸಲಾತಿ ನೀಡುವ ಮೂಲಕ ನ್ಯಾಯ ಒದಗಿಸಬೇಕು ಇಲ್ಲವೇ ನಮ್ಮ ಹೋರಾಟ ಮತ್ತಷ್ಟು ಹೆಚ್ಚಾಗಲಿದೆ ಎಂದರು. 

- Advertisement - 

ಈ ವೇಳೆ ತಾಲ್ಲೂಕು ಭೋವಿ ಜನಾಂಗ ಸಂಘದ ಅಧ್ಯಕ್ಷ ರಾಮಕೃಷ್ಣ, ಹಿರಿಯ ಉಪಾಧ್ಯಕ್ಷರು ಕೆ ವಿ ವೆಂಕಟರಮಣಪ್ಪ, ಉಪಾಧ್ಯಕ್ಷ ರಾಮಯ್ಯ,ಸಂಘಟನಾ ಕಾರ್ಯದರ್ಶಿ ಸುಗ್ರೀವಪ್ಪ, ತಾಲ್ಲೂಕು ಯುವ ಉಪಾಧ್ಯಕ್ಷ ಶ್ರೀನಿವಾಸ್, ಮದುರೆ ಹೋಬಳಿ ಅಧ್ಯಕ್ಷ ಮುನಿರಾಜು, ನಗರ ಘಟಕ ಅಧ್ಯಕ್ಷ ಮಂಜುನಾಥ್, ಕಸಬಾ ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಸಾಸಲು ಹೋಬಳಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಭೋವಿ ಸಮುದಾಯದ ಹಲವು ಪ್ರಮುಖರು ಮುಖಂಡರು ಹಾಜರಿದ್ದರು. 

 

Share This Article
error: Content is protected !!
";