ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಾಗೂ ಹಿರಿಯೂರು ತಾಲ್ಲೂಕಿನ ಪ್ರಗತಿಪರ ವಿಚಾರ ಇದಾಗಿದೆ. ಹಿರಿಯೂರಿನಲ್ಲಿ ಸಕ್ಕರೆ ಕಾರ್ಖಾನೆ ಪುನರಾರಂಭ ಕಂಡರೆ ತಾಲ್ಲೂಕಿನ ಗತವೈಭವ ಮರಳಿದಂತೆ ಎಂದು ಹೇಳಬಹುದು.
ವಾಣಿವಿಲಾಸ ಜಲಾಶಯಕ್ಕೆ ನೀರನ್ನು ಭರ್ತಿಯಾಗಿ ತುಂಬಿಸಿದರೆ ಹಿರಿಯೂರು ತಾಲ್ಲೂಕಿಗೆ ಹೊಂದಿಕೊಂಡಿರುವ ಎಲ್ಲಾ ತಾಲ್ಲೂಕು ಪ್ರಾಂತ್ಯದಲ್ಲಿ ಅಂತರ್ಜಲ ವೃದ್ಧಿಗೆ ಕಾರಣವಾಗಿದೆ.
ಸರ್ಕಾರ ಮತ್ತು ಕೃಷಿ ಇಲಾಖೆ ಕಬ್ಬು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಿದರೆ ಸಕ್ಕರೆ ಕಾರ್ಖಾನೆ ಪ್ರಗತಿ ಕಾಣುವುದು ನಿಶ್ಚಿತ. ಕಬ್ಬು ಬೆಳೆದರೆ ಪರಿಸರದಲ್ಲಿ ಬಹಳಷ್ಟು ಉತ್ತಮ ಬದಲಾವಣೆ ಕಾಣಬಹುದು.
ಯುಗ ಯುಗಗಳು ಕಳೆದರೂ ಭದ್ರಾ ಮೇಲ್ದಂಡೆ ಯೋಜನೆ ಪ್ರಕಾರವಾಗಿ ಮಾರಿ ಕಣಿವೆಗೆ ನೀರು ಬರಬೇಕು ಪ್ರತಿ ವರ್ಷವು ಕೆರೆ ಕೋಡಿ ಹೋಗಬೇಕು ಇದು ರೈತರ ಬದುಕಿನ ಪರವಾಗಿ ನನ್ನ ಆಶಯ ವಾಗಿದೆ ಎಂದು ಚಿಂತಕ ರಘು ಗೌಡ ತಿಳಿಸಿದ್ದಾರೆ.