ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಶನಿವಾರ ನಗರದ ಖಾಸ್ ಭಾಗ್ ನಲ್ಲಿರುವ ಶ್ರೀ ರಥ ಸಪ್ತಮಿ ಶನೇಶ್ವರ ದೇವಾಲಯದಲ್ಲಿ 42ನೇ ಮಾಸದ ರಂಗಜ್ಯೋತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಲಾವಿದರ ಸಂಘದ ಗೌರವಧ್ಯಕ್ಷರಾದ ಡಾ. ಕೆ. ಎಂ. ಕೃಷ್ಣಮೂರ್ತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರಾದ ಡಾ. ಡಿ. ಕೆಂಪಣ್ಣವರು, ಉಪಾಧ್ಯಕ್ಷರಾದ ಡಾ, ಎ. ಶ್ರೀಧರ ಗೌಡ್ರು, ರಥಸಪ್ತಮಿ ಶನೇಶ್ವರ ದೇವಾಲಯದ ಪ್ರದಾನ ಅರ್ಚಕರಾದ ಎಂ. ಪುಟ್ಟಯ್ಯನವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಎನ್. ದೊಡ್ಡ ನರಸಪ್ಪ ಹಾಗೂ ಸಮಾಜ ಸೇವಕರು ಅಲ್ಟ್ರಾ ಟೆಕ್ ಸಿಮೆಂಟ್ ಕಪನಿಯ ನಿವೃತ್ತ ಹಿರಿಯ ಆಡಳಿತಧಿಕಾರಿಗಳಾದ ಎಂ. ಎಸ್. ಮಂಜುನಾಥ್ ರವರಿಗೆ ರಂಗ ಕಲಾಜ್ಯೋತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ರಂಗಭೂಮಿ ಕಲಾವಿದರಿಂದ ರಂಗ ಗೀತ ಗಾಯನ ಸಬಿಕರ ಮನ ಸೆಳೆದಿತ್ತು.
ಕಾರ್ಯಕ್ರಮದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಪುಟ್ಟ ಸಿದ್ದಯ್ಯ, ಖಜಾಂಚಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಎಂ. ಎ. ನಾಗರಾಜು, ನಿರ್ದೇಶಕರಾದ ಅರ್. ಎಂ. ಮುನಿರಾಜು, ಡಾ, ಸಿದ್ದರಾಮಯ್ಯ, ಶ್ರೀಮತಿ ನಾಗರತ್ನಮ್ಮ, ಶ್ರೀಮತಿ ಮನೋಹರ್, ಆರ್. ಎ. ಸಂಜೀವರಾಯಪ್ಪ, ಮುನಿರಾಜ್, ಕೆ. ಸಿ. ಮುನಿಕೃಷ್ಣಪ್ಪ, ಪ್ರದೀಪ್ ಕುಮಾರ್, ಕೇಶವ ಮೂರ್ತಿ, ಸೇರಿದಂತೆ ಹಲವಾರು ರಂಗಕರ್ಮಿಗಳು ಉಪಸ್ಥಿತರಿದ್ದರು.

