ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರ ಇವುಗಳ ಸಹಯೋಗದೊಂದಿಗೆ ಡಿ.೨೧ ರ ಭಾನುವಾರ ಬೆಳಿಗ್ಗೆ ೯-೩೦ ರಿಂದ ೧-೩೦ ರವರೆಗೆ ಮುರುಘಾಮಠದ ಅನುಭವ ಮಂಟಪದಲ್ಲಿ ವಿಶ್ವ ಧ್ಯಾನ ದಿನದ ಅಂಗವಾಗಿ ಸಾಮೂಹಿಕ ಸಂಗೀತ ಧ್ಯಾನ ಏರ್ಪಡಿಸಲಾಗಿದೆ.
ಬಸವಕುಮಾರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಾಮೂಹಿಕ ಸಂಗೀತ ಧ್ಯಾನದಲ್ಲಿ ಮುಖ್ಯ ಅತಿಥಿಗಳಾಗಿ ಶಿವಯೋಗಿ ಸಿ.ಕಳಸದ, ಬ್ರಹ್ಮಶ್ರಿ ಪ್ರೇಮನಾಥ, ಡಾ.ಹರಿಕೃಷ್ಣ, ಗೌರೀಶ್ ಇವರುಗಳು ಭಾಗವಹಿಸಲಿದ್ದಾರೆ.
ಸಾಮೂಹಿಕ ಸಂಗೀತ ಧ್ಯಾನದಲ್ಲಿ ಭಾಗವಹಿಸುವವರಿಗೆ ಸಾರಿಗೆ ವ್ಯವಸ್ಥೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ : ೮೮೮೪೬೧೬೮೫೫, ೮೬೬೦೬೨೬೪೭೩ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

